ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗದ ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್ ಕೊಟ್ಟ ಶಿಮುಲ್

ಶಿವಮೊಗ್ಗ ಲೈವ್.ಕಾಂ | SHIMOGA | 5 ಫೆಬ್ರವರಿ 2020

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯ ಹಾಲು ಉತ್ಪಾದಕರ ಹಾಲಿನ ದರ ಫೆ.6ರಿಂದ ಜಾರಿಗೆ ಬರುವಂತೆ 1 ರೂ. ಹೆಚ್ಚಳವಾಗಲಿದೆ. ಆ ಮೂಲಕ ಹಾಲು ಉತ್ಪಾದಕರಿಗೆ ನೀಡಲಾಗುವ ದರದಲ್ಲಿ ಶಿಮುಲ್ ಮತ್ತೆ ಕ್ರಾಂತಿ ಮಾಡಿದೆ. ರಾಜ್ಯದಲ್ಲಿ ಬೇರಾವ ಒಕ್ಕೂಟಗಳು ತಮ್ಮ ಹಾಲು ಉತಾದಕರಿಗೆ ನೀಡದಷ್ಟು ದರವನ್ನು ಹಾಲು ಶಿಮುಲ್ ನೀಡುತ್ತಿದೆ.

ಫೆ.1ರಿಂದ ಹಾಲಿನ ಮಾರಾಟ ದರವನ್ನು ಪ್ರತಿ ಲೀಟರ್‌ಗೆ 2 ರೂ. ಹೆಚ್ಚಳ ಮಾಡಲಾಗಿದೆ. ಅದರಲ್ಲಿ 1 ರೂ. ಅನ್ನು ರೈತರಿಗೆ ಮರಳಿಸಲು ಒಕ್ಕೂಟದ ಆಡಳಿತ ಮಂಡಳಿಯು ಮಂಗಳವಾರ ನಡೆಸಿದ ಸಭೆಯಲ್ಲಿ ತೀರ್ಮಾನ ಕೈಗೊಂಡಿದೆ.

ಇನ್ನು ಮುಂದೆ ಒಕ್ಕೂಟದಿಂದ ಸಂಘಗಳಿಗೆ ಎಫ್’ಎಟಿ ಶೇ.4.1, ಎಸ್‌ಎನ್‌ಎಫ್ ಶೇ.8.50 ಇರುವ ಪ್ರತಿ ಕೆ.ಜಿ. ಹಾಲಿಗೆ 33.08 ರೂ. ಹಾಗೂ ಸಂಘದಿಂದ ಉತ್ಪಾದಕರಿಗೆ ಎಫ್‌ಎಟಿ ಶೇ.4.1 ಇರುವ ಪ್ರತಿ ಕೆ.ಜಿ. ಹಾಲಿಗೆ 31.28 ರೂ. ಲಭ್ಯವಾಗಲಿದೆ. ಗುಣಮಟ್ಟದ ಹಾಲಿಗೆ ಸಂಘದ ಸಿಬ್ಬಂದಿಗೆ ನೀಡಲಾಗುವ ಪ್ರೋತ್ಸಾಹ ಧನವನ್ನು ಲೀಟರ್‌ಗೆ 40 ಪೈಸೆಗೆ ಹೆಚ್ಚಳ ಮಾಡಿದರೆ, ಸಂಘಗಳ ಕಾರ್ಯದರ್ಶಿಗೆ ಲೀಟರ್‌ಗೆ.10 ಪೈಸೆ ನೀಡಲಾಗುತ್ತದೆ.

ಇಷ್ಟೇ ಅಲ್ಲದೆ ಮಾರಾಟಕ್ಕೂ ಉತ್ತೇಜನ ನೀಡುವ ಉದ್ದೇಶದಿಂದ ಡೀಲರ್‌ಗಳ ಕಮಿಷನ್ ದರ ಸಹ ಹೆಚ್ಚಳ ಮಾಡಲಾಗಿದೆ ಎಂದು ಶಿಮುಲ್ ಅಧ್ಯಕ್ಷ ಆನಂದ್ ಅವರು ತಿಳಿಸಿದರು. ಒಕ್ಕೂಟದ ವ್ಯಾಪ್ತಿಯಲ್ಲಿ ದಿನವಹಿ ಸರಾಸರಿ 4.80 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಇದರಲ್ಲಿ 2.40 ಲಕ್ಷ ಲೀಟರ್‌ ಮಾರಾಟವಾದರೆ, ಕ್ಷೀರ ಭಾಗ್ಯ ಯೋಜನೆಗೆ ಪುಡಿ ಮತ್ತು ಇತರೆ ಹಾಲಿನ ಉತ್ಪನ್ನಗಳ ತಯಾರಿಕೆಗೆ 1.80 ಲಕ್ಷ ಲೀಟರ್ ಹಾಗೂ ಕೇರಳಕ್ಕೆ 15ಸಾವಿರ ಲೀಟರ್ ಹಾಲು ಪೂರೈಕೆ ಮಾಡಲಾಗುತ್ತಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಡಾ. ಲೋಹಿತೇಶ್ವರ ತಿಳಿಸಿದ್ದಾರೆ.

ಹಾಲಿನ ದರ ನಾಲ್ಕನೆ ಬಾರಿ ಹೆಚ್ಚಳ

ರೈತರ ಹಾಲಿನ ದರ ಹೆಚ್ಚಳ ಮಾಡುವಲ್ಲಿ ಶಿವಮೊಗ್ಗ ಹಾಲು ಒಕ್ಕೂಟವು ಹೊಸ ಕ್ರಾಂತಿಯನ್ನೇ ಮಾಡಿದೆ. 2018ನೇ ಆಗಸ್ಟ್‌ನಿಂದ ಈಚೆಗೆ ನಾಲ್ಕು ಬಾರಿ ಒಟ್ಟಾರೆ 7.70 ರೂ. ಹೆಚ್ಚಳ ಮಾಡಿದೆ. ಆಗಸ್ಟ್ 3ರಂದು 2.50 ರೂ., ಅಕ್ಟೋಬರ್ 1ರಂದು 2.50 ರೂ., ಡಿಸೆಂಬರ್ 11ರಂದು 1.70 ರೂ. ಹೆಚ್ಚಳ ಮಾಡಿತ್ತು. ಈಗ ಮತ್ತೆ 1 ರೂ. ಹೆಚ್ಚಳ ಮಾಡಿದೆ. ಉತ್ಪಾದಕರಿಗೆ ಅಧಿಕ ದರ ನೀಡಿ ದರೂ ಗ್ರಾಹಕರಿಗೆ ಮಾತ್ರ ಫೆ.1ರಿಂದ ಜಾರಿಗೆ ಬರುವಂತೆ ಸರಕಾರದ ಸೂಚನೆ ಅನ್ವಯ 2 ರೂ. ಹೆಚ್ಚಳ ಮಾಡಲಾಗಿದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!
Open chat