ಮಂಡಗದ್ದೆ ಸಮೀಪದ ಹಲ್ಲೆ ಕೇಸ್‌ಗೆ ಬಿಗ್ ಟ್ವಿಸ್ಟ್, ವಿಡಿಯೋದಲ್ಲಿ ಹೇಳಿದ್ದೊಂದು, ವಿಚಾರಣೆ ವೇಳೆ ಬಾಯಿಬಿಟ್ಟಿದ್ದು ಮತ್ತೊಂದು

ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ಮೇ 2020

ಮಂಡಗದ್ದೆ ಸಮೀಪ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆದಿದೆ ಎಂಬ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ವೈರಲ್ ಆಗಿದ್ದ ವಿಡಿಯೋದಲ್ಲಿದ್ದ ಸಂಗತಿಗು, ಪೊಲೀಸ್ ವಿಚಾರಣೆ ವೇಳೆ ಬೈಕ್ ಸವಾರ ಮತ್ತು ಹಲ್ಲೆಗೊಳಗಾದ ವ್ಯಕ್ತಿ ತಿಳಿಸಿದ ಮಾಹಿತಿಗು ಭಿನ್ನತೆ ಕಂಡು ಬಂದಿದೆ.

ವೈರಲ್ ವಿಡಿಯೋದಲ್ಲಿ ಏನಿತ್ತು?

ಮಂಡಗದ್ದೆ ಸಮೀಪ ವ್ಯಕ್ತಿಯೊಬ್ಬನ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿತ್ತು. ಗಾಯಗೊಂಡು ರಕ್ತ ಸುರಿಯುತ್ತಿದ್ದರೂ ಆ ವ್ಯಕ್ತಿ ನಡೆದುಕೊಂಡು ಶಿವಮೊಗ್ಗದ ಕಡೆಗೆ ಬರುತ್ತಿದ್ದರು. ಇದೇ ವೇಳೆ ಬೈಕ್‍ನಲ್ಲಿ ಬಂದ ವ್ಯಕ್ತಿಯೊಬ್ಬರು ಗಾಯಾಳುವಿಗೆ ನೆರವು ನೀಡಿದ್ದಾರೆ. ಈ ವೇಳೆ ಮೊಬೈಲ್‍ನಲ್ಲಿ ವಿಡಿಯೋ ಮಾಡಿದ್ದು, ರಸ್ತೆ ಪಕ್ಕ ನಮಾಜ್ ಮಾಡಿದ್ದಕ್ಕೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿತ್ತು. ಈ ವಿಡಿಯೋ ವೈರಲ್ ಆಗಿತ್ತು.

ವಿಚಾರಣೆ ವೇಳೆ ಶಾಕಿಂಗ್ ಸಂಗತಿ ಬಹಿರಂಗ

ಇನ್ನು, ಗಾಯಾಳುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಈ ವೇಳೆ ಕೆಲವು ಶಾಕಿಂಗ್ ಸಂಗತಿ ಬಹಿರಂಗವಾಗಿದೆ. ವೈರಲ್ ಆದ ವಿಡಿಯೋದಲ್ಲಿನ ವಿಚಾರಕ್ಕೂ, ಪೊಲೀಸ್ ವಿಚಾರಣೆ ವೇಳೆ ತಿಳಿದು ಬಂದ ಸಂಗತಿಗು ವ್ಯತ್ಯಾಸ ಕಂಡು ಬಂದಿದೆ.

ಗಾಯಾಳುವಿಗೆ ಮಾತು ಬರುವುದಿಲ್ಲ. ಕನ್ನಡ ಭಾಷೆಯು ಅರ್ಥ ಆಗುವುದಿಲ್ಲ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ. ಮಾತು ಬಾರದ ಹಿನ್ನೆಲೆ ತಜ್ಞರನ್ನು ಕರೆಯಿಸಿ, ಸಂಜ್ಞೆ ಭಾಷೆ ಮೂಲಕ ಪ್ರಶ್ನೆ ಮಾಡಲಾಗಿದೆ. ಈ ವೇಳೆ ಕಾರು, ಅಪಘಾತ ಮತ್ತು ಗಲಾಟೆ ಸಂಗತಿಯನ್ನು ತಿಳಿಸಿದ್ದಾನೆ. ಇದರ ಕಂಪ್ಲೀಟ್ ಮಾಹಿತಿಯನ್ನು ಶಿವಮೊಗ್ಗ ಲೈವ್.ಕಾಂಗೆ ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದ್ದಾರೆ.

ಗಾಯಾಳುವಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!
Open chat