ದಾಖಲೆ ಇಲ್ಲದೆ ಕಾರಿನಲ್ಲಿ 38 ಲಕ್ಷ ರುಪಾಯಿ ಸಾಗಣೆ, ಒಬ್ಬ ಅರೆಸ್ಟ್

ಶಿವಮೊಗ್ಗ ಲೈವ್.ಕಾಂ | SAGARA NEWS | 6 ಆಗಸ್ಟ್ 2020

ದಾಖಲೆ ಇಲ್ಲದೆ ಕಾರಿನಲ್ಲಿ ಹಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈತನಿಂದ 38 ಲಕ್ಷ ರುಪಾಯಿ ಹಣ ಮತ್ತು ಕಾರನ್ನು ವಶಕ್ಕೆ ಪಡೆಯಲಾಗಿದೆ.

ಸಯ್ಯದ್ ಆಸೀಫ್ (42) ಬಂಧಿತ ಆರೋಪಿ. ಸಾಗರದ ಇಂದಿರಾ ಗಾಂಧಿ ಕಾಲೇಜು ಬಳಿ ಕಾರಿನಲ್ಲಿ ಹಣ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ, ತಪಾಸಣೆ ನಡೆಸಲಾಯಿತು. ಈ ವೇಳೆ ದಾಖಲೆ ಇಲ್ಲ ಎಂದು ಆರೋಪಿ ತಿಳಿಸಿದ್ದರಿಂದ, ಬಂಧಿಸಿ, ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹಣ ಮತ್ತು ಸ್ವಿಫ್ಟ್ ಕಾರು ವಶಕ್ಕೆ ಪಡೆಯಲಾಗಿದೆ. ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಗರ ಡಿವೈಎಸ್‍ಪಿ ವಿನಾಯಕ ಶೆಟಗೇರಿ, ಇನ್ಸ್‍ಪೆಕ್ಟರ್ ಅಶೋಕ್ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!
Open chat