ಗಾಳಿ, ಮಳೆ, ಹಲವು ಕಡೆ ವಿದ್ಯುತ್ ಕಟ್, ಅನೇಕ ಗ್ರಾಮಗಳಲ್ಲಿ ನೂರು ಮಿ.ಮೀಗೂ ಹೆಚ್ಚು ಮಳೆ, ಎಲ್ಲೆಲ್ಲಿ? ಯಾವ್ಯಾವ ತಾಲೂಕು?

ಶಿವಮೊಗ್ಗ ಲೈವ್.ಕಾಂ | SHIMOGA NEWS | 6 ಆಗಸ್ಟ್ 2020

ಜಿಲ್ಲೆಯಲ್ಲಿ ಭಾರಿ ಮಳೆ, ಗಾಳಿಗೆ ಹಲವು ಕಡೆ ಮರಗಳು ಧರೆರಗುಳಿದ್ದು, ವಿದ್ಯುತ್ ವ್ಯತ್ಯಯವಾಗಿದೆ. ಅನೇಕ ಗ್ರಾಮಗಳಲ್ಲಿ ಎರಡ್ಮೂರು ದಿನದಿಂದ ಕರೆಂಟ್ ಇಲ್ಲವಾಗಿದೆ.

ಗಾಳಿ, ಮಳೆ ಮೆಸ್ಕಾಂ ಶಿವಮೊಗ್ಗ ಸರ್ಕಲ್ ವ್ಯಾಪ್ತಿಯ 39 ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. 87 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಸುಮಾರು 8.02 ಲಕ್ಷ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಹೊಸನಗರ, ತೀರ್ಥಹಳ್ಳಿ, ಸಾಗರ, ಶಿವಮೊಗ್ಗ ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಿರುವ ದೂರುಗಳಿವೆ.

ನೂರು ಮೀಟರ್ ಮಳೆ

ಈ ನಡುವೆ ಇವತ್ತು ಬೆಳಗ್ಗೆ ದಾಖಲಾಗಿದೆ ಮಳೆ ಮಾಪನದ ವರದಿಯಂತೆ, ಜಿಲ್ಲೆಯ ಹಲವು ಗ್ರಾಮಗಳಲ್ಲಿ ನೂರು ಮೀಟರ್‍ಗೂ ಹೆಚ್ಚು ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯಲ್ಲಿ ತಿಳಿಸಲಾಗಿದೆ.

ಹೊಸನಗರ | ತ್ರಿಣಿವೆ 127 ಮಿ.ಮೀ, ಅಮೃತ 125 ಮಿ.ಮೀ,

ಸೊರಬ | ಹೆಚ್ಚೆ 124.50 ಮಿ.ಮೀ,

ಸಾಗರ | ಕುದರೂರು 126 ಮಿ.ಮೀ, ತಲವಟ 125 ಮಿ.ಮೀ,

ತೀರ್ಥಹಳ್ಳಿ | ತೀರ್ಥಮತ್ತೂರು 141.50 ಮಿ.ಮೀ, ಬೆಜ್ಜವಳ್ಳಿ 124 ಮಿ.ಮೀ, ಅರಳಸುರುಳಿ 126 ಮಿ.ಮೀ, ಆರಗ 125 ಮಿ.ಮೀ, ಹೊಸಹಳ್ಳಿ 130 ಮಿ.ಮೀ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!
Open chat