ಭಾರೀ ಮಳೆ, ಶಿವಮೊಗ್ಗದ ಮೂರು ಪ್ರಮುಖ ಜಲಾಶಯಗಳ ಒಳಹರಿವು ಹೆಚ್ಚಳ, ಯಾವ್ಯಾವ ಡ್ಯಾಂಗೆ ಎಷ್ಟೆಷ್ಟಿದೆ ಒಳಹರಿವು?

ಶಿವಮೊಗ್ಗ ಲೈವ್.ಕಾಂ | SHIMOGA NEWS | 6 ಆಗಸ್ಟ್ 2020

ಜಿಲ್ಲೆಯಾದ್ಯಂತ ಮಳೆ ಪ್ರಮಾಣ ಹೆಚ್ಚಾದಂತೆ ಜಲಾಶಯಗಳಿಗೆ ನೀರಿನ ಒಳಹರಿವು ಏರಿಕೆಯಾಗುತ್ತಿದೆ. ತುಂಗಾ ಜಲಾಶಯದಿಂದ ಮಾತ್ರ ಸದ್ಯಕ್ಕೆ ನೀರು ಹೊರ ಬಿಡಲಾಗುತ್ತಿದೆ.

ಯಾವ್ಯಾವ ಜಲಾಶಯದ ಒಳ, ಹೊರ ಹರಿವೆಷ್ಟು?

ತುಂಗಾ ಜಲಾಶಯ | ಸದ್ಯ 21 ಗೇಟ್‍ಗಳನ್ನು ತೆಗೆದು ತುಂಗಾ ಜಲಾಶಯದಿಂದ ನೀರು ಹೊರ ಬಿಡಲಾಗುತ್ತಿದೆ. ಈ ಸುದ್ದಿ ಪ್ರಕಟವಾಗುವ ಹೊತ್ತಿಗೆ ತುಂಗಾ ಜಲಾಶಯಕ್ಕೆ 67 ಸಾವಿರ ಕ್ಯೂಸೆಕ್ ನೀರು ಒಳಹರಿವು ಇತ್ತು. 68 ಸಾವಿರ ಕ್ಯೂಸೆಕ್ ಹೊರ ಹರಿವು ಇದೆ.

ಭದ್ರಾ ಜಲಾಶಯ | ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಭದ್ರಾ ಜಲಾಶಯದ ಒಳ ಹರಿವು ಹೆಚ್ಚಳವಾಗುತ್ತಿದೆ. ಬೆಳಗ್ಗೆ 8 ಗಂಟೆಗೆ ಹೊತ್ತಿಗೆ ಜಲಾಶಯದ ನೀರಿನ ಮಟ್ಟ 159.50 ಅಡಿಗೆ ಏರಿಕೆಯಾಗಿತ್ತು. 35,875 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿತ್ತು. ಮಳೆ ಪ್ರಮಾಣ ಹೆಚ್ಚಳದಿಂದಾಗಿ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಸುಮಾರು 70 ಸಾವಿರ ಕ್ಯೂಸೆಕ್ ಒಳಹರಿವು ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಿಂಗನಮಕ್ಕಿ ಡ್ಯಾಂ | ಇತ್ತ ಲಿಂಗನಮಕ್ಕಿ ಜಲಾಶಯಕ್ಕೂ ಭಾರಿ ಪ್ರಮಾಣದ ನೀರು ಒಳಹರಿವು ಇದೆ. 84,806 ಕ್ಯೂಸೆಕ್ ನೀರು ಒಳಹರಿವು ಇದೆ. ಇವತ್ತು ಜಲಾಶಯದ ನೀರಿನ ಮಟ್ಟ 1782 ಅಡಿಯಷ್ಟಿದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!
Open chat