ನಾಯಿ ದಾಳಿಗೆ ಸೊರಬದಲ್ಲಿ ಜಿಂಕೆ ಸಾವು, ಎಲ್ಲಿ? ಹೇಗಾಯ್ತು ಘಟನೆ?

ಶಿವಮೊಗ್ಗ ಲೈವ್.ಕಾಂ | SORABA NEWS | 24 ಸೆಪ್ಟಂಬರ್ 2020

ನಾಯಿ ದಾಳಿಗೆ ತುತ್ತಾಗಿದ್ದ ಜಿಂಕೆಯೊಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಸೊರಬ ತಾಲೂಕು ಉರಗನಹಳ್ಳಿಯಲ್ಲಿ ಘಟನೆ ಸಂಭವಿಸಿದೆ.

ಆಹಾರ ಅರಸುತ್ತ ಕಾಡಿನಿಂದ ಗ್ರಾಮದ ಕಡೆಗೆ ಬಂದಿತ್ತು ಜಿಂಕೆ. ಈ ವೇಳೆ ನಾಯಿಗಳು ದಾಳಿ ಮಾಡಿದ್ದವು. ಗಂಭೀರವಾಗಿ ಗಾಯಗೊಂಡಿದ್ದ ಜಿಂಕೆಯನ್ನು ಗ್ರಾಮಸ್ಥರು ರಕ್ಷಣೆ ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಡಿಆರ್‍ಎಫ್‍ಒ ಸತ್ಯನಾರಾಯಣ, ಅರಣ್ಯ ರಕ್ಷಕ ವಿರೂಪಾಕ್ಷಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ, ಪಶು ಆಸ್ಪತ್ರೆಯಲ್ಲಿ ಜಿಂಕೆಗೆ ಚಿಕಿತ್ಸೆ ಕೊಡಿಸಿದ್ದರು. ಆದರೆ ಕಾಡಿಗೆ ಬಿಡುವ ವೇಳೆಗೆ ಜಿಂಕೆ ಮೃತಪಟ್ಟಿದೆ. ಎಸಿಎಫ್ ಪಿ.ಆರ್.ಮಂಜುನಾಥ್, ಆರ್‍ಎಫ್‍ಒ ಗಣೇಶ್ ಶೆಟ್ಟರ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!
Open chat