ರಂಜದಕಟ್ಟೆ ಸೇತುವೆ ಸಂಪೂರ್ಣ ಕುಸಿತ, ವಾಹನ ಸಂಚಾರಕ್ಕೆ ಪೊಲೀಸರಿಂದ ಪರ್ಯಾಯ ಮಾರ್ಗ

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 24 ಸೆಪ್ಟಂಬರ್ 2020

ಶಿಥಿಲವಾಗಿದ್ದ ತೀರ್ಥಹಳ್ಳಿ ತಾಲೂಕು ರಂಜದಕಟ್ಟೆ ಸೇತುವೆ ಈಗ ಸಂಪೂರ್ಣ ಕುಸಿದಿದೆ. ಹಾಗಾಗಿ ತೀರ್ಥಹಳ್ಳಿ ಆಗುಂಬೆ ನಡುವಿನ ರಾಷ್ಟ್ರೀಯ ಹೆದ್ದಾರಿ 169ಎ ಸಂಪರ್ಕ ಕಡಿತವಾದಂತಾಗಿದೆ.

ರಂಜದಕಟ್ಟೆ ಸೇತುವೆ ಕುಸಿಯುವ ಹಂತಕ್ಕೆ ತಲುಪಿತ್ತು. ಹಾಗಾಗಿ ಸೇತುವೆ ಮೇಲೆ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು. ಮಧ್ಯಾಹ್ನದ ವೇಲೆ ಸೇತುವೆ ಸಂಪೂರ್ಣ ಕುಸಿದಿದೆ. ಸೇತುವೆ ಒಂದು ಕಮಾನು ಪೂರ್ಣ ಕುಸಿದಿದ್ದು, ರಸ್ತೆ ಸಂಪರ್ಕ ಕಡಿತವಾದಂತಾಗಿದೆ.

ಪರ್ಯಾಯ ಮಾರ್ಗ

ಇನ್ನು, ಸೇತುವೆ ಕುಸಿದ ಹಿನ್ನೆಲೆ ತೀರ್ಥಹಳ್ಳಿ ಆಗುಂಬೆ ನಡುವೆ ವಾಹನ ಸಂಚಾರಕ್ಕೆ ಪೊಲೀಸ್ ಇಲಾಖೆ ಪರ್ಯಾಯ ಮಾರ್ಗ ಸೂಚಿಸಿದೆ. ಲಘು ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ತೀರ್ಥಹಳ್ಳಿ ಪಟ್ಟಣದಿಂದ ಸಾಗರ ರಸ್ತೆಯ ಕವಲೆದುರ್ಗ ಸರ್ಕಲ್‍ನಿಂದ ಸಾತ್ಗೋಡು ಬಿಳಾಲಕೊಪ್ಪ ಕಡೆಯಿಂದ ಆಗುಂಬೆ ರಸ್ತೆಗೆ ತಲುಪಬಹುದಾಗಿದೆ. ಆಗುಂಬೆಯಿಂದ ತೀರ್ಥಹಳ್ಳಿ ಪಟ್ಟಣಕ್ಕೆ ಇದೆ ಮಾರ್ಗದಲ್ಲಿ ಸಂಚರಿಸಬಹುದಾಗಿದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!
Open chat