ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ, ಕೆಳಗಿಳಿದ ಮೂವರು ಸಾವು, ಕಾರಿನಲ್ಲಿದ್ದ ಮೂವರ ರಕ್ಷಣೆ, ಹೇಗಾಯ್ತು ಘಟನೆ?

ಶಿವಮೊಗ್ಗ ಲೈವ್.ಕಾಂ | HOSANAGARA NEWS | 24 ಸೆಪ್ಟಂಬರ್ 2020

ತಾಲೂಕು ಗರ್ತಿಕೆರೆ ಗ್ರಾಮದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ. ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದ್ದು, ಕಾರಿನಿಂದ ಕೆಳಗಿಳಿದವರು ಸಾವನ್ನಪ್ಪಿದ್ದಾರೆ. ಆತಂಕದಿಂದ ಕಾರಿನಲ್ಲೇ ಕುಳಿತ ಮೂವರ ರಕ್ಷಣೆ ಮಾಡಲಾಗಿದೆ.

ಹೇಗಾಯ್ತು ಅಪಘಾತ?

ಹೊಸನಗರ ಕಡೆಯಿಂದ ರಾತ್ರಿ ರಿಪ್ಪನ್‍ಪೇಟೆಗೆ ಬರುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಶೀಲಿಸಲು ಕಾರಿನಿಂದ ಕೆಳಗಿಳಿದ ಚಾಲಕ ಲೋಹಿತ್ (34) ದಿಢೀರ್ ಕುಸಿದು ಬಿದ್ದಿದ್ದಾರೆ. ಲೋಹಿತ್ ತಾಯಿ ಕಲಾವತಿ (60) ಮತ್ತು ಅವರ ಮೊಮ್ಮಗ ಶಶಾಂಕ್ (8)  ಕೂಡ ಕಾರಿನಿಂದ ಕೆಳಗಿಳಿದಿದ್ದಾರೆ. ಇಬ್ಬರು ಕುಸಿದು ಬಿದ್ದಿದ್ದಾರೆ.

ಕಾರಿನಲ್ಲಿದ್ದ ಮೂವರ ರಕ್ಷಣೆ

ಕಾರಿನಲ್ಲಿದ್ದ ಮೂವರು ಕುಸಿದು ಬಿದ್ದಿದ್ದರಿಂದ ಆತಂಕಕ್ಕೀಡಾದ ಇನ್ನೂ ಮೂವರು ಕಾರಿನಿಂದ ಕೆಳಗಿಳಿಯಲಿಲ್ಲ. ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರು, ಪೊಲೀಸರು ಮತ್ತು ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಮೂವರನ್ನು ರಕ್ಷಿಸಿದ್ದಾರೆ. ಕಾರಿನಲ್ಲಿದ್ದ ಕಲಾವತಿ ಅವರ ಮಗಳು ಅಂಬಿಕಾ (35), ಅಂಬಿಕಾ ಅವರ ಪತಿ ರವಿಭಟ್ (45), ಇವರ ಮಗ ಗಣೇಶ್‍ನನ್ನು ರಕ್ಷಣೆ ಮಾಡಲಾಗಿದೆ.

ಕರೆಂಟ್ ಶಾಕ್ ಶಂಕೆ

ಕಾರು ಗುದ್ದಿದ ಕಂಬದಲ್ಲಿ ವಿದ್ಯುತ್ ಪ್ರವಹಿಸಿರುವ ಶಂಕೆಯಿದೆ. ಹಾಗಾಗಿ ಕಾರಿನಿಂದ ಕೆಳಗಿಳಿದ ಮೂವರು ವಿದ್ಯುತ್ ಶಾಕ್‍ನಿಂದ ಕೊನೆಯುಸಿರೆಳೆದಿರುವ ಅನುಮಾನವಿದೆ. ಇವರ ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.

ರಿಪ್ಪನ್‍ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!
Open chat