ಶನಿಮಹಾತ್ಮ ದೇವಸ್ಥಾನದ ಹುಂಡಿ ಹಣ, ದೇವರ ಬೆಳ್ಳಿ ವಸ್ತು ಕದ್ದರು ಅರೆಸ್ಟ್

ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 15 ಅಕ್ಟೋಬರ್ 2020

ಶಿವಮೊಗ್ಗದ ಆರ್.ಎಂ.ಎಲ್ ನಗರದಲ್ಲಿ ಶನಿಮಹಾತ್ಮ ದೇವಸ್ಥಾನಕ್ಕೆ ಕನ್ನ ಹಾಕಿದ್ದ ಇಬ್ಬರನ್ನು ದೊಡ್ಡಪೇಟೆ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇನ್ನಿಬ್ಬರು ಎಸ್ಕೇಪ್ ಅಗಿದ್ದು, ಅವರ ಪತ್ತೆ ಕಾರ್ಯ ನಡೆಯುತ್ತಿದೆ.

ಬುದ್ಧನಗರದ ವಸೀಮ್ ಅಕ್ರಂ (19), ರಾಗಿಗುಡ್ಡ ನಿವಾಸಿ ಮೊಹಮ್ಮದ್ ಕರೀಂ (19) ಬಂಧಿತರು. ಇವರು ಹಣ್ಣಿನ ವ್ಯಾಪಾರಿಗಳು.

ದೇವಸ್ಥಾನದ ಶಟರ್ ಮುರಿದು 15 ಸಾವಿರ ರೂ. ಕಾಣಿಕೆ ಹಣ, ಗರ್ಭಗುಡಿಯ ಬೀರುವಿನಲ್ಲಿದ್ದ 5 ಸಾವಿರ ಮೌಲ್ಯದ ಬೆಳ್ಳಿಯ ಸಾಮಗ್ರಿ ಕಳವು ಮಾಡಿದ್ದರು. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!
Open chat