ಸಿಗಂದೂರು ದೇಗುಲದ ಗರ್ಭಗುಡಿ ಪಕ್ಕ ಪ್ರಧಾನ ಅರ್ಚಕನ ಸಹೋದರನಿಂದ ವ್ಯಕ್ತಿ ಮೇಲೆ ಹಲ್ಲೆ, ವಿಡಿಯೋ ವೈರಲ್

ಶಿವಮೊಗ್ಗ ಲೈವ್.ಕಾಂ | SAGARA NEWS | 16 ಅಕ್ಟೋಬರ್ 2020

ಸಿಗಂದೂರು ಶ್ರೀ ಚೌಡೇಶ್ವರಿ ಸನ್ನಿಧಿಯಲ್ಲಿ ಪ್ರಧಾನ ಅರ್ಚಕರ ಸಹೋದರ, ಭಕ್ತರೊಬ್ಬರ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅರ್ಚಕರ ಸಹೋದರನ ನಡೆ ವಿರುದ್ಧ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಧಾನ ಅರ್ಚಕ ಶೇಷಗಿರಿ ಭಟ್ ಅವರು ಕುಟುಂಬ ಸಹಿತವಾಗಿ ಇವತ್ತು ಮೌನವ್ರತ ಮಾಡುತ್ತಿದ್ದರು. ಗರ್ಭಗುಡಿಯಲ್ಲಿ ಮೌನವ್ರತ ನಡೆಯುತ್ತಿದ್ದರೆ, ದೇವಸ್ಥಾನಕ್ಕೆ ಭಕ್ತರು ಬಂದು ಹೋಗುತ್ತಿದ್ದರು. ಸ್ಥಳೀಯ ಭಕ್ತರೊಬ್ಬರು ಬಂದಾಗ ಅವರ ಮೇಲೆ ಶೇಷಗಿರಿ ಭಟ್ ಅವರ ಸಹೋದರ ಹಲ್ಲೆ ನಡೆಸಿದ್ದಾರೆ.

ಗರ್ಭಗುಡಿಯ ಪಕ್ಕದಲ್ಲೇ ಭಕ್ತರೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. ಅದರ ವಿಡಿಯೋಗಳು ಈಗ ವೈರಲ್ ಆಗಿದೆ. ಶೇಷಗಿರಿ ಭಟ್ ಅವರು ತಮ್ಮ ಸಹೋದರನನ್ನು ತಡೆದರೂ, ಆ ವ್ಯಕ್ತಿ ಮೇಲಿನ ಹಲ್ಲೆ ಮುಂದುವರೆಯುತ್ತದೆ. ಈ ನಡುವೆ ಶೇಷಗಿರಿ ಭಟ್ ಅವರು, ಸಿಗಂದೂರು ಹಾಳಗಲು ಇವನೆ ಕಾರಣ ಎಂದು ಆರೋಪಿಸುವುದು ವಿಡಿಯೋದಲ್ಲಿ ದಾಖಲಾಗಿದೆ. ಅಲ್ಲದೆ ಹೋಗಿ ರಾಮಪ್ಪ ಅವರನ್ನು ಕರೆದುಕೊಂಡು ಬಾ ಎಂದು ಹೇಳುತ್ತಾರೆ.

ದೇಗುಲದಲ್ಲಿ ಗ್ಲಾಸ್ ಪೀಸ್

ಶೇಷಗಿರಿ ಭಟ್ ಅವರ ಸಹೋದರ ದೇವಾಲಯದ ಕೊಠಡಿಗಳಿಗೆ ತೆರಳಿ, ಗ್ಲಾಸ್ ಪೀಸ್ ಮಾಡುವುದು, ಕೊಠಡಿಗಳಲ್ಲಿ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡುವುದು ಕೂಡ ವೈರಲ್ ಆಗಿರುವ ವಿಡಿಯೋಗಳಲ್ಲಿದೆ. ಇದು ಸಿಗಂದೂರು ಶ್ರೀ ಚೌಡೇಶ್ವರಿ ಭಕ್ತರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸಿಗಂದೂರು | ಪ್ರಧಾನ ಅರ್ಚಕ ಶೇಷಗಿರಿ ಭಟ್ ಸಹೋದರನಿಂದ ವ್ಯಕ್ತಿ ಮೇಲೆ ದೇಗುಲ್ಲದಲ್ಲೆ ಹಲ್ಲೆ

ಸಿಗಂದೂರು | ಪ್ರಧಾನ ಅರ್ಚಕ ಶೇಷಗಿರಿ ಭಟ್ ಸಹೋದರನಿಂದ ವ್ಯಕ್ತಿ ಮೇಲೆ ದೇಗುಲ್ಲದಲ್ಲೆ ಹಲ್ಲೆ

Posted by Shivamogga Live on Friday, October 16, 2020

ಭಕ್ತರಿಗೆ ಶಾಕ್ ಕೊಟ್ಟ ವರ್ತನೆ

ಇತ್ತ ಶೇಷಗಿರಿ ಭಟ್ ಮತ್ತು ಅವರ ಸಹೋದರ ಮೌನವ್ರತ ನಡೆಸುತ್ತಿದ್ದರೆ, ದೂರದೂರುಗಳಿಂದ ಬಂದಿದ್ದ ಭಕ್ತರು, ದೇವಿಯ ದರ್ಶನಕ್ಕೆ ಪರದಾಡಬೇಕಾಯಿತು. ಶೇಷಗಿರಿ ಭಟ್ ಅವರ ಸಹೋದರನ ವರ್ತನೆ ಕಂಡು ಭಕ್ತರು ಶಾಕ್ ಆದರು. ಗಲಾಟೆಯಾಗುತ್ತಿದ್ದರಿಂದ ಕಿಟಕಿಗಳಲ್ಲಿ ನಿಂತು ಗಾಬರಿಯಿಂದ ನೋಡುತ್ತಿದ್ದರು.

ಖಾಕಿ ಪಡೆಯ ಮುಂದೆಯೇ ಹಲ್ಲೆ

ವ್ಯಕ್ತಿ ಮೇಲೆ ಶೇಷಗಿರಿ ಭಟ್ ಅವರ ಸಹೋದರ ಹಲ್ಲೆ ನಡೆಸುತ್ತಿದ್ದರೆ, ಪೊಲೀಸರು ಮೌನಕ್ಕೆ ಶರಣಾಗಿದ್ದರು. ಹಲ್ಲೆಯ ವಿಡಿಯೋ ಮಾಡಿಕೊಳ್ಳುತ್ತಿದ್ದರು. ಪೊಲೀಸರು ಗಲಾಟೆ ನಿಲ್ಲಿಸದಿರುವುದು ಕೂಡ ಅಕ್ರೋಶಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಬಂದ ಪಿಎಸ್ಐ ಅವರು, ಶೇಷಗಿರಿ ಭಟ್ ಅವರ ಸಹೋದರನಿಗೆ ಖಡಕ್ ಎಚ್ಚರಿಕೆ ಕೊಟ್ಟು, ದೇಗುಲದಿಂದ ಹೊರಗೆ ಕಳುಹಿಸಿದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!
Open chat