ಶಿವಮೊಗ್ಗ ದಸರಾಗೆ ಸಿದ್ಧತೆ ಶುರು, ಸೇಫ್ ಲಾಕರ್‌ನಿಂದ ಹೊರ ಬಂತು ಬೆಳ್ಳಿ ಅಂಬಾರಿ, ಬೆಳ್ಳಿಯ ನಾಡದೇವಿ ಮೂರ್ತಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಅಕ್ಟೋಬರ್ 2020

ಶಿವಮೊಗ್ಗ ದಸರಾಗೆ ಮಹಾನಗರ ಪಾಲಿಕೆಯಲ್ಲಿ ಸಿದ್ಧತೆ ಆರಂಭವಾಗಿದೆ. ಸೇಫ್‍ ಲಾಕರ್‍ನಲ್ಲಿದ್ದ ನಾಡದೇವತೆ ಚಾಮುಂಡೇಶ್ವರಿಯ ಬೆಳ್ಳಿ ಮೂರ್ತಿ ಮತ್ತು ಅಂಬಾರಿಯನ್ನು ಹೊರಗೆ ತೆಗೆಯಲಾಗಿದೆ.

VIDEO REPORT

ಮಹಾನಗರ ಪಾಲಿಕೆಯ ಮುಖ್ಯ ಕಟ್ಟಡದಲ್ಲಿ ಇರುವ ಸೇಫ್‍ ಲಾಕರ್‍ನಲ್ಲಿ ಅಂಬಾರಿ ಮತ್ತು ನಾಡ ದೇವಿಯ ಬೆಳ್ಳಿ ಮೂರ್ತಿಯನ್ನು ಇರಿಸಲಾಗಿತ್ತು. ಸಂಪೂರ್ಣ ಬೆಳ್ಳಿಯಿಂದ ಸಿದ್ಧವಾಗಿರುವ ಅಂಬಾರಿ ಮತ್ತು ನಾಡದೇವಿಯ ಮೂರ್ತಿಯನ್ನು ಈ ಲಾಕರ್‍ನಿಂದ ಹೊರತೆಗೆದು ಪಾಲಿಕೆಯಲ್ಲಿ ಸ್ವಚ್ಛಗೊಳಿಸಲಾಯಿತು.

ಗೈಡ್‍ ಲೈನ್ಸ್ ಬಿಡುಗಡೆ

ಈ ನಡುವೆ ರಾಜ್ಯ ಸರ್ಕಾರ ಗೈಡ್‍ಲೈನ್ಸ್ನ ಆಧಾರದಲ್ಲಿ ಮಹಾನಗರ ಪಾಲಿಕೆಯು ಗೈಡ್‍ ಲೈನ್ ಬಿಡುಗಡೆ ಮಾಡಿದೆ. ನವರಾತ್ರಿ ಹಿನ್ನೆಲೆ ಯಾವುದೇ ಸಾಂಸ್ಕೃತಿ ಕಾರ್ಯಕ್ರಮ ಮತ್ತು ಮೆರವಣಿಗೆ ಇರುವುದಿಲ್ಲ. ಬನ್ನಿ ಮುಡಿಯುವ ಕಾರ್ಯಕ್ರಮವನ್ನು ಸ್ಥಳೀಯ ಮಾಧ್ಯಮ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಮೂಲಕ ನೇರ ಪ್ರಸಾರ ಮಾಡಲಾಗುತ್ತದೆ. ಯಾವುದೆ ಕಾರ್ಯಕ್ರಮದಲ್ಲಿ ನೂರಕ್ಕಿಂತಲೂ ಹೆಚ್ಚು ಜನರು ಸೇರುವಂತಿಲ್ಲ ಎಂದು ಆಯುಕ್ತರು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!
Open chat