ಹೆಲ್ಮೆಟ್ ಧರಿಸಿ ಮನೆಯೊಳಗೆ ನುಗ್ಗಿದರು, ಮಹಿಳೆಯ ಮಾಂಗಲ್ಯ ಸರ ಕಿತ್ತೊಯ್ದರು

ಶಿವಮೊಗ್ಗ ಲೈವ್.ಕಾಂ | RIPPONPETE NEWS | 17 ಅಕ್ಟೋಬರ್ 2020

ಹಾಡಹಗಲು ಮನೆಯೊಳಗೆ ನುಗ್ಗಿದ ಇಬ್ಬರು ಅಪರಿಚಿತರು ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಬೀಡಿನಲ್ಲಿ ಘಟನೆ ಸಂಭವಿಸಿದೆ.

ಜಯಲಕ್ಷ್ಮಿ (73) ಎಂಬುವವರು ಮಾಂಗಲ್ಯ ಸರ ಕಳೆದುಕೊಂಡಿದ್ದಾರೆ. ಮಾಂಗಲ್ಯ ಸರದ ಮೌಲ್ಯ 1.10 ಲಕ್ಷ ಎಂದು ಅಂದಾಜಿಸಲಾಗಿದೆ.

ವ್ಯಾಪಾರಕ್ಕೆ ಬಂದವರದ್ದೇ ಕೃತ್ಯಾನಾ?

ಒಂದೆರಡು ದಿನದ ಹಿಂದೆ ಮನೆಗೆ ಬಂದಿದ್ದ ಇಬ್ಬರು ಅಪರಿಚಿತರನ್ನು ತಮ್ಮನ್ನು ವ್ಯಾಪಾರಿಗಳು ಎಂದು ಪರಿಚಯಿಸಿಕೊಂಡಿದ್ದರು. ಅವರೆ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಮನೆಯಲ್ಲಿ ಜಯಲಕ್ಷ್ಮಿ ಮತ್ತು ಅವರ ಪತಿ ಮಾತ್ರ ಇದ್ದರು. ಶನಿವಾರ ಬೈಕ್‍ನಲ್ಲಿ ಬಂದ ಇಬ್ಬರು ಅಪರಿಚಿತರು ಹೆಲ್ಮೆಟ್ ಧರಿಸಿಕೊಂಡು ಮನೆಯೊಳಗೆ ಬಂದಿದ್ದಾರೆ. ಜಯಲಕ್ಷ್ಮಿ ಅವರ ಕೊರಳಲ್ಲಿ ಇದ್ದ ಮಾಂಗಲ್ಯ ಸರ ಕಿತ್ತುಕೊಂಡ ಪರಾರಿಯಾಗಿದ್ದಾರೆ.

ಜಯಲಕ್ಷ್ಮಿ ಅವರು ಜೋರಾಗಿ ಕೂಗಿಕೊಂಡಾಗ ಸಮೀಪದಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ಅವರ ಓಡಿ ಬಂದಿದ್ದಾರೆ. ಈ ಹೊತ್ತಿಗಾಗಲೆ ಕಳ್ಳರು ಬೈಕ್‍ನಲ್ಲಿ ಪರಾರಿಯಾಗಿದ್ದಾರೆ.

ರಿಪ್ಪನ್‍ಪೇಟೆ ಠಾಣೆ ಪಿಎಸ್ಐ ಪಾರ್ವತಿ ಬಾಯಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತೀರ್ಥಹಳ್ಳಿ ಡಿವೈಎಸ್‍ಪಿ ಸಂತೋಷ್ ಕುಮಾರ್, ಹೊಸನಗರ ಸಿಪಿಐ ಮಧುಸೂದನ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!
Open chat