ವಿನೋಬನಗರ ಚೌಕಿ – ಸೋಮಿಕೊಪ್ಪ ನೂರು ಅಡಿ ರಸ್ತೆ ಒತ್ತುವರಿ, ಕೆಲವು ಕಡೆ 80 ಅಡಿಯಿದೆ, ಒಂದಷ್ಟು ಕಡೆ 90 ಅಡಿಯಾಗಿದೆ

ಶಿವಮೊಗ್ಗ ಲೈವ್.ಕಾಂ | SHIMOGA NEWS | 17 ಅಕ್ಟೋಬರ್ 2020

ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ವೇಳೆ ಒತ್ತುವರಿ ತೆರವು ಮಾಡದೆ, ನೂರು ಅಡಿ ರಸ್ತೆಯ ಅಗಲ ಕೆಲವು ಕಡೆ ಕಡಿಮೆಯಾಗಿದೆ ಎಂದು ಆರೋಪಿಸಿ ಹುಚ್ಚರಾಯ ಕಾಲೋನಿ ನಿವಾಸಿಗಳ ಸಂಘ ಸಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದೆ.

ವಿನೋಬನಗರದ ಪೊಲೀಸ್ ಚೌಕಿಯಿಂದ ಸೋಮಿನಕೊಪ್ಪ 100 ಅಡಿ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ ರಸ್ತೆಯ ಒತ್ತುವರಿ ತೆರವು ಮಾಡದೆ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದ ಒಂದೊಂದು ಕಡೆ ರಸ್ತೆಯ ಅಗಲ ಒಂದೊಂದು ರೀತಿಯದ್ದಾಗಿದೆ ಎಂದು ಆರೋಪಿಸಿದರು.

ಒತ್ತುವರಿಯಿಂದಾಗಿ 100 ಅಡಿ ರಸ್ತೆಯು ಒಂದು ಕಡೆ 80 ರಿಂದ 90 ಅಡಿ ರಸ್ತೆಯಾಗಿ ಪರಿವರ್ತನೆಯಾಗಿದೆ. ಇನ್ನು, ಕೆಲವು ಕಡೆ ರಸ್ತೆಯ ಮಧ್ಯದಿಂದ 50 ಅಡಿ ಮತ್ತೊಂದು ಕಡೆ 40 ಅಡಿ ಡ್ರೈನೇಜ್ ನಿರ್ಮಿಸಲಾಗಿದೆ. ಕೂಡಲೆ ಇದನ್ನು ಸರಿಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!
Open chat