ಸಿಎಂ ಬರುವ ಹೊತ್ತಿಗೆ ಸರಿಯಾಗಿ ಕೈಕೊಟ್ಟ ಎಸಿ, ವಿಧಾನಸಭೆ ಸ್ಪೀಕರ್ ಕಾರು ಕಾಣದೆ ಯಡಿಯೂರಪ್ಪ ಗರಂ

ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಅಕ್ಟೋಬರ್ 2020

ಸಿಎಂ ಯಡಿಯೂರಪ್ಪ ಅವರು ಬಂದಾಗಲೆ ಕೈಕೊಡ್ತು ಎಸಿ. ಸ್ಪೀಕರ್ ಕಾರು ಕಾಣಿಸದೆ ಮುಖ್ಯಮಂತ್ರಿ ಗರಂ.

ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಮುಖ್ಯಮಂ‍ತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಲ್ಲಿನ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿ, ಅಧಿಕಾರಿಗಳು, ಜನಪ್ರತಿನಧಿಗಳ ಸಭೆ ನಡೆಸಿದರು.

ಸಿಎಂ ಭೇಟಿ ವೇಳೆ ಕೈಕೊಟ್ಟ ಎಸಿ

ಸಿಎಂ ಭೇಟಿ ಹಿನ್ನೆಲೆಯಲ್ಲಿ ಪ್ರವಾಸಿ ಮಂದಿರದಲ್ಲಿ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಲೈಟು, ಎಸಿ ಸೇರಿದಂತೆ ಎಲ್ಲವನ್ನು ಪದೇ ಪದೇ ಚೆಕ್ ಮಾಡಲಾಗಿತ್ತು. ಆದರೆ ಯಡಿಯೂರಪ್ಪ ಅವರು ಕೊಠಡಿಗೆ ಬರುತ್ತಿದ್ದಂತೆ ಎಸಿ ಕೈಕೊಟ್ಟಿದೆ. ಕೊಠಡಿಯೊಳಗೆ ವಿಪರೀತ ಶಕೆ ಶುರುವಾಯ್ತು. ಇದರಿಂದ ಯಡಿಯೂರಪ್ಪ ಸಿಟ್ಟಾದರು. ಕೊನೆಗೆ ಐಬಿಯಲ್ಲಿದ್ದ ಎಲ್ಲಾ ಟೇಬಲ್ ಫ್ಯಾನುಗಳನ್ನು ತರಿಸಿ, ಕೊಠಡಿಯಲ್ಲಿ ಹಾಕಲಾಯಿತು.

ಸ್ಪೀಕರ್ ಕಾರು ಕಾಣಿಸಲೇ ಇಲ್ಲ

ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಿವಮೊಗ್ಗ ಪ್ರವಾಸಿ ಮಂದಿರದಲ್ಲಿದ್ದರು. ಅವರೊಂದಿಗೆ ಸಿಎಂ ಕೆಲ ಹೊತ್ತು ಚರ್ಚೆ ನಡೆಸಿದರು. ಸ್ಪೀಕರ್ ಅವರನ್ನು ಬೀಳ್ಕೊಡಲು ಕಾರಿನವರೆಗೆ ಬಂದರು. ಆದರೆ ವಿಶ್ವೇಶರ ಹೆಗಡೆ ಕಾಗೇರಿ ಅವರ ಕಾರು ಕಾಣಿಸಲೇ ಇಲ್ಲ. ಸಿಎಂ ಕಾರು, ಬೆಂಗಾವಲು ಪಡೆಯ ಕಾರುಗಳಿಂದಾಗಿ ಸ್ಪೀಕರ್ ಕಾರು ಹಿಂದೆ ಇತ್ತು. ಕೆಲ ಕ್ಷಣ ಕಾದರೂ ಕಾರು ಬಾರದಿದ್ದಾಗ ಯಡಿಯೂರಪ್ಪ ಅವರು ಅಧಿಕಾರಿಗಳತ್ತ ಗರಂ ಅದರು. ಕೊನೆಗೆ ಸಂಸದ ರಾಘವೇಂದ್ರ ಅವರು ಮಧ್ಯಪ್ರವೇಶಿಸಿ, ಸ್ಪೀಕರ್ ಕಾರು ಮುಂದೆ ಬರುವಂತೆ ನೋಡಿಕೊಂಡರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!