ಸಕ್ರೆಬೈಲು ಆನೆ ಬಿಡಾರದ ಏಕದಂತ ಇನ್ನಿಲ್ಲ, ಸಾವಿಗೆ ಕಾರಣವೇನು?

ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಅಕ್ಟೋಬರ್ 2020

ಎರಡು ದಿನದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಶಿವಮೊಗ್ಗ ಸಕ್ರೆಬೈಲಿನ ಬಿಡಾರದ ಆನೆ ಏಕದಂತ ಇವತ್ತು ಮೃತಪಟ್ಟಿದೆ. ಆನೆಗೆ 35 ವರ್ಷ ವಯಸ್ಸಾಗಿತ್ತು.

ಎರಡು ದಿನದಿಂದ ಏಕದಂತ ಆನೆಯ ಆರೋಗ್ಯದಲ್ಲಿ ವ್ಯತ್ಯಾಸವಾಗಿತ್ತು. ಇವತ್ತು ಶೆಟ್ಟಿಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಏಕದಂತ ಆನೆ ಮೃತಪಟ್ಟಿದೆ.

ಎರಡು ವರ್ಷದ ಹಿಂದೆ ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಈ ಆನೆಯನ್ನು ಸೆರೆ ಹಿಡಿಯಲಾಗಿತ್ತು. ಸಕ್ರೆಬೈಲು ಆನೆ ಬಿಡಾರದಲ್ಲಿ ಇದನ್ನು ಪಳಗಿಸಲಾಗಿತ್ತು. ಅನಾರೋಗ್ಯದ ಹಿನ್ನೆಲೆ ಸಕ್ರೆಬೈಲು ಬಿಡಾರದ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!