ಸಿಎಂ ಯಡಿಯೂರಪ್ಪ ಅವರಿಗೆ ವೇದಿಕೆಯಲ್ಲೇ ಒಂದು ಬೇಡಿಕೆ ಇಟ್ಟ ಸಚಿವ ಈಶ್ವರಪ್ಪ

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 20 ಅಕ್ಟೋಬರ್ 2020

ಯಡಿಯೂರಪ್ಪ ಅವರೆ ನಮ್ಮ ಇಲಾಖೆಗೆ ಒಳ್ಳೆಯ ಅಧಿಕಾರಿಗಳನ್ನು ಕೊಡಿ. ಇನ್ನೊಂದು ವರ್ಷದಲ್ಲಿ ಈ ಯೋಜನೆ ಜಾರಿಗೊಳಿಸುತ್ತೇನೆ. ಇದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸಿಎಂ ಯಡಿಯೂರಪ್ಪ ಅವರ ಮುಂದಿಟ್ಟಿರುವ ಬಹಿರಂಗ ಬೇಡಿಕೆ ಇದು.

ಶಿಕಾರಿಪುರದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ಮನೆ ಮನೆಗೆ ಗಂಗೆ ಯೋಜನೆ ಜಾರಿಗೊಳಿಸಿ, ಪ್ರತಿ ಹಳ್ಳಿಯ ಮನೆ ಮನೆಗೂ ನಲ್ಲಿ ನೀರು ಪೂರೈಕೆ ಮಾಡಲು ಬದ್ಧವಾಗಿದ್ದೇನೆ. ಆದರೆ ಒಳ್ಳೆಯ ಅಧಿಕಾರಿಗಳನ್ನು ಕೊಡಿ ಎಂದು ವೇದಿಕೆಯಲ್ಲೇ ಸಿಎಂ ಮುಂದೆ ಬೇಡಿಕೆ ಇಟ್ಟರು.

ಯೋಜನೆಗೆ ಸೂಕ್ತವಾಗಿ ಸ್ಪಂದಿಸುವ, ತ್ವರಿತವಾಗಿ ಕೆಲಸ ಮಾಡುವ ಅಧಿಕಾರಿಗಳು ನನ್ನ ಇಲಾಖೆಗೆ ಬೇಕು. ಆಸಕ್ತಿಯಿಂದ ಕಾರ್ಯನಿರ್ವಹಿಸುವ ಅಧಿಕಾರಿಗಳನ್ನು ವರ್ಗಾಯಿಸಿ ಎಂದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!