ಇಕ್ಕೇರಿ ಜೋಡಿ ಕೊಲೆ ಹಂತಕನ ಕಾಲಿಗೆ ಶಿವಮೊಗ್ಗ ಪೊಲೀಸರಿಂದ ಫೈರಿಂಗ್, ಹೇಗಾಯ್ತು ಗೊತ್ತಾ ಘಟನೆ?

ಶಿವಮೊಗ್ಗ ಲೈವ್.ಕಾಂ | SAGARA NEWS | 20 ಅಕ್ಟೋಬರ್ 2020

ಜಿಲ್ಲೆಯಲ್ಲಿ ಪೊಲೀಸರ ಬಂದೂಕು ಮತ್ತೊಮ್ಮೆ ಸದ್ದು ಮಾಡಿದೆ. ತಪ್ಪಿಸಿಕೊಳ್ಳುತ್ತಿದ್ದ ಆರೋಪಿಯೊಬ್ಬನ ಕಾಲಿಗೆ ಪೊಲೀಸರು ಸಾಗರದಲ್ಲಿ ಗುಂಡು ಹಾರಿಸಿದ್ದಾರೆ.

ಗುಂಡೇಟು ತಿಂದ ಆರೋಪಿ ಭರತ್‌ ಎಂಬಾತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಪ್ಪಿಸಿಕೊಳ್ಳುವ ಭರದಲ್ಲಿ ಆರೋಪಿ ಭರತ್ ಪೊಲೀಸ್ ಸಿಬ್ಬಂದಿ ಒಬ್ಬರ ಮೇಲೆ ಹಲ್ಲೆ. ಈ ವೇಳೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

ಯಾರಿದು ಭರತ್?

ಇಕ್ಕೇರಿ ಸಮೀಪ ಇತ್ತೀಚೆಗೆ ತಾಯಿ ಮತ್ತು ಮಗನ ಕೊಲೆಯಾಗಿತ್ತು. ಈ ಜೋಡಿ ಕೊಲೆಯ ಆರೋಪಿಯೆ ಭರತ್. ಈತ ಬೆಂಗಳೂರಿನವನು. ಜೊಡಿ ಕೊಲೆ ಬಳಿಕ ಭರತ್ ಎಸ್ಕೇಪ್ ಆಗಿದ್ದ.

ಹೇಗಾಯ್ತು ಘಟನೆ?

ಭರತ್, ಬೆಂಗಳೂರಿನಿಂದ ಬಂದು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದ. ತನಿಖೆ ನಡೆಸುತ್ತಿದ್ದ ಪೊಲೀಸರು ಭರತ್‍ನನ್ನು ಬಂಧಿಸಿ, ಇವತ್ತು ಮಹಜರ್‍ಗೆ ಕರೆತಂದಿದ್ದರು. ಮಹಜರ್ ಮಾಡಿ, ಮರಳುವಾಗ ಭರತ್ ಮೂತ್ರ ವಿಸರ್ಜನೆಗೆ ಮನವಿ ಮಾಡಿದ್ದಾನೆ. ಪೊಲೀಸರು ವಾಹನದಿಂದ ಕೆಳಗಿಳಿಸಿದಾಗ ಚಂದ್ರಾನಾಯ್ಕ್ ಎಂಬ ಪೊಲೀಸ್ ಸಿಬ್ಬಂದಿ ಮೇಲೆ ಚೈನ್‍ನಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ.

ಭರತ್ ಎಸ್ಕೇಪ್ ಆಗುವುದನ್ನು ಗಮಿಸಿದ ಜಿಲ್ಲಾ ಅಪರಾಧ ತನಿಖಾ ವಿಭಾಗದ ಇನ್ಸ್‍ಪೆಕ್ಟರ್ ಕುಮಾರಸ್ವಾಮಿ ಗುಂಡು ಹಾರಿಸಿದ್ದಾರೆ. ಭರತ್ ಕಾಲಿಗೆ ಗುಂಡು ತಗುಲಿದ್ದು, ಆತನನ್ನು ಕೂಡಲೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಡಿಸಿಐಬಿ ಇನ್ಸ್‍ಪೆಕ್ಟರ್‍ ಕುಮಾರಸ್ವಾಮಿ, ಮಹಿಳಾ ಠಾಣೆ ಇನ್ಸ್‍ಪೆಕ್ಟರ್ ಅಭಯಪ್ರಕಾಶ್, ರೌಡಿ ನಿಗ್ರಹ ದಳದ ಸಬ್‍ ಇನ್ಸ್‍ಪೆಕ್ಟರ್ ಉಮೇಶ್ ಅವರ ನೇತೃತ್ವದ ತಂಡ ಹಂತಕ ಭರ‍ತ್‍ನನ್ನು ಬಂಧಿಸಿತ್ತು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!