ಆಯುಧ ಪೂಜೆಗೆ ಶಿವಮೊಗ್ಗದಲ್ಲಿ ಖರೀದಿ ಜೋರು, ಹೂವು, ಬಾಳೆ ಕಂದು, ಕುಂಬಳಕಾಯಿ ಬೆಲೆ ಎಷ್ಟಿತ್ತು?

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ಅಕ್ಟೋಬರ್ 2020

ಆಯುಧ ಪೂಜೆ ಮತ್ತು ವಿಜಯದಶಮಿ ಹಿನ್ನೆಲೆ ಶಿವಮೊಗ್ಗದಲ್ಲಿ ಹಬ್ಬದ ಖರೀದಿ ಜೋರಾಗಿತ್ತು. ಗಾಂಧಿ ಬಜಾರ್, ಶಿವಪ್ಪನಾಯಕ ಮಾರುಕಟ್ಟೆಯಲ್ಲಿ ಜನ ಸಂದಣಿ ಹೆಚ್ಚಾಗಿತ್ತು.

ಹೂವು, ಹಣ್ಣು ನೂರರ ಮೇಲೆ

ಆಯುಧ ಪೂಜೆ ಹಿನ್ನೆಲೆ ಹೂವು ಮತ್ತು ಹಣ್ಣು ಖರೀದಿ ಬಿರುಸಾಗಿತ್ತು. ಬೆಲೆ ದುಬಾರಿ ಅನಿಸಿದರೂ, ಖರೀದಿ ಮಾತ್ರ ಜೋರಿತ್ತು. ಚಂಡು ಹೂವು ಕೆಜಿಗೆ ನೂರೈವತ್ತು ಇನ್ನೂರು ರುಪಾಯಿ ಇತ್ತು. ಉಳಿದ ಹೂವುಗಳ ಬೆಲೆಯಲ್ಲೇನು ಬದಲಾವಣೆ ಇರಲಿಲ್ಲ. ಸಾಮಾನ್ಯ ದಿನಕ್ಕಿಂತಲೂ ಹುವಿನ ಹಾರಗಳಿಗೆ ಇವತ್ತು ಬೆಲೆ ಮತ್ತು ಬೇಡಿಕೆ ಹೆಚ್ಚಿತ್ತು. ಇನ್ನು ಹಣ್ಣುಗಳ ಬೆಲೆಯು ಗಗಮುಖಿಯಾಗಿವೆ.

ಬಾಳೆ ಕಂದು, ಬೂದುಗುಂಬಳಕ್ಕೆ ಡಿಮಾಂಡ್

ಬಾಳೆ ಕಂದು, ಬೂದುಗುಂಬಳ ಆಯುಧ ಪೂಜೆಗೆ ಅತಿ ಮುಖ್ಯ. ಇವುಗಳ ಖರೀದಿಗೂ ಜನರು ಮುಗಿಬಿದ್ದಿದ್ದರು. ಬೂದುಗುಂಬಳಕ್ಕೆ 50 ರುಪಾಯಿಯಿಂದ 200 ರೂ. ವರೆಗೂ ಇದೆ. ಗಾತ್ರದ ಆಧಾರದ ಮೇಲೆ ಬೆಲೆ ನಿಗದಿ ಮಾಡಲಾಗುತ್ತಿದೆ. ಬಾಳೆ ಕಂದು ಬೆಲೆ ಕೂಡ ಜೋಡಿಗೆ 50 ರುಪಾಯಿಂದ ಮೇಲಿತ್ತು.

ಮಾರುಕಟ್ಟೆಯಾದ ಸರ್ಕಲ್, ರಸ್ತೆ

ಗಾಂಧಿ ಬಜಾರ್, ಶಿವಪ್ಪನಾಯಕ ಮಾರುಕಟ್ಟೆ ಮಾತ್ರವಲ್ಲ ಶಿವಮೊಗ್ಗ ನಗರದ ಹಲವು ಕಡೆ ಹೂವು, ಹಣ್ಣು, ಬಾಳೆ ಕಂದು, ಕುಂಬಳಕಾಯಿ ಮಾರಾಟ ಬಿರುಸಾಗಿತ್ತು. ಗೋಪಿ ಸರ್ಕಲ್, ಲಕ್ಷ್ಮೀ ಟಾಕೀಸ್ ಬಳಿ, ವಿನೋಬನಗರ ಸೇರಿದಂತೆ ವಿವಿಧೆಡೆ ವ್ಯಾಪಾರಿಗಳು ಪೂಜಾ ಸಾಮಾಗ್ರಿ ಮಾರಾಟ ಮಾಡುತ್ತಿದ್ದರು.

ಬಿಡುವು ನೀಡಿದ್ದ ವರುಣ

ಕಳೆದ ಎರಡು ದಿನದಿಂದ ಮಧ್ಯಾಹ್ನವೆ ಶಿವಮೊಗ್ಗದಲ್ಲಿ ವರುಣನ ಆರ್ಭಟ ಶುರುವಾಗುತ್ತಿತ್ತು. ಆದರೆ ಇವತ್ತು ಸಂಜೆವರೆಗೂ ಮಳೆ ಬಿಡುವು ನೀಡುತ್ತು. ಹಾಗಾಗಿ ಹಬ್ಬದ ಖರೀದಿ ಬಿರುಸಾಗಿತ್ತು. ಸಂಜೆ ವೇಳೆಗೆ ಶುರುವಾದ ಮಳೆ ಜೋರಾಗಿದ್ದು, ಹೂವು, ಹಣ್ಣು, ಪೂಜಾ ಸಾಮಾಗ್ರಿ ಮಾರಾಟಗಾರರು ಸಂಕಷ್ಟಕ್ಕೀಡಾದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!