ಬಂಗಾರಪ್ಪ ಅವರ ಮೊದಲ ಪ್ರತಿಮೆ, ಪಾರ್ಕ್ ಉದ್ಘಾಟನೆಗೆ ಸಿದ್ಧ, ಹೇಗಿದೆ ಪಾರ್ಕ್?

ಶಿವಮೊಗ್ಗ ಲೈವ್.ಕಾಂ | SORABA NEWS | 25 ಅಕ್ಟೋಬರ್ 2020

ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಮೊದಲ ಪ್ರತಿಮೆ ಉದ್ಘಾಟನೆಗೆ ಸಿದ್ಧವಾಗಿದೆ. ಇದರೊಂದಿಗೆ ಪಟ್ಟಣದ ಹೃದಯ ಭಾಗದಲ್ಲಿ ಬಂಗಾರಪ್ಪ ಅವರ ಹೆಸರಿನ ಪಾರ್ಕ್ ಕೂಡ ಲೋಕಾರ್ಪಣೆಗೊಳ್ಳಲಿದೆ.

VIDEO REPORT

ಸೊರಬ ಪಟ್ಟಣದ ಬಸ್ ನಿಲ್ದಾಣದ ಮುಂಭಾಗ ಬಂಗಾರಪ್ಪ ಪಾರ್ಕ್ ಸಿದ್ಧಪಡಿಸಲಾಗಿದೆ. ಪಾರ್ಕ್‍ನ ಮಧ್ಯ ಭಾಗದಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪ್ರತಿಮೆಯನ್ನು ನಿರ್ಮಿಸಲಾಗಿದೆ. ರಾಜ್ಯದಲ್ಲಿ ಇದೆ ಮೊದಲ ಬಾರಿಗೆ ಬಂಗಾರಪ್ಪ ಅವರ ಪ್ರತಿಮೆ ಸಿದ್ಧವಾಗಿದೆ.

ಹೇಗಿದೆ ಪಾ‌ರ್ಕ್‌? ಏನಿದರ ವಿಶೇಷತೆ?

21.15 ಲಕ್ಷ ರುಪಾಯಿಯಲ್ಲಿ ಈ ಪಾರ್ಕ್ ನಿರ್ಮಿಸಲಾಗಿದೆ. ಪಾರ್ಕ್‍ನಲ್ಲಿ ವಾಕಿಂಗ್ ಪಾಥ್ ಇದೆ. ಮೂರು ವಿಶ್ರಾಂತಿ ಕುಟೀರಗಳನ್ನು ನಿರ್ಮಿಸಲಾಗಿದೆ. ಪಾರ್ಕ್‍ನ ನಡುವೆ ಹುಲ್ಲು ಹಾಸು ಇದ್ದು, ಸುತ್ತಲು ಹೂವಿನ ಗಿಡಗಳನ್ನು ನೆಡಲಾಗಿದೆ. ಸ್ಥಳೀಯ ಪ್ರದೇಶಾಭಿವೃದ್ಧಿ ಮತ್ತು ಪಟ್ಟಣ ಪಂಚಾಯಿತಿಯ 2018 – 19ರ ಅನುದಾನ, 14ನೇ ಹಣಕಾಸು ಮತ್ತು ಶಾಸಕರ ಸ್ಥಳೀಯ ಅನುದಾನದಿಂದ ಪಾರ್ಕ್ ನಿರ್ಮಿಸಲಾಗಿದೆ.

ಬಂಗಾರಪ್ಪ ಪ್ರತಿಮೆ ಇದೇ ಮೊದಲು

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪ್ರತಿಮೆ ನಿರ್ಮಾಣವಾಗಿ, ಉದ್ಘಾಟನೆ ಆಗುತ್ತಿರುವುದು ಇದೆ ಮೊದಲು. ಅವರ ಸಮಾಧಿ ಸ್ಥಳ ಬಂಗಾರಧಾಮದಲ್ಲಿ ಪ್ರತಿಮೆ ನಿರ್ಮಿಸಲು ಯೋಜಿಸಲಾಗಿತ್ತು. ಆದರೆ ಅದು ಇನ್ನು ಪೂರ್ಣಗೊಂಡಿಲ್ಲ. ಈ ಹಿಂದೆ ದೂಗೂರು ಗ್ರಾಮದಲ್ಲಿ ಬಂಗಾರಪ್ಪ ಅವರ ಅಭಿಮಾನಿಗಳು ಪ್ರತಿಮೆ ನಿರ್ಮಿಸಿ, ಸ್ಥಾಪಿಸಲು ಮುಂದಾಗಿದ್ದರು. ಆದರೆ ಕುಟುಂಬದವರು ಒಪ್ಪಿಗೆ ನೀಡದ ಹಿನ್ನೆಲೆ, ತಾಲೂಕು ಆಡಳಿತ ಅದನ್ನು ವಶಕ್ಕೆ ಪಡೆದಿತ್ತು.

ಈಗ ಬಂಗಾರಪ್ಪ ಪ್ರತಿಮೆ ಮತ್ತು ಪಾರ್ಕ್ ಉದ್ಘಾಟನೆಗೆ ಸಿದ್ಧವಾಗಿದೆ. ವಿಜಯದಶಮಿಯಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಾರ್ಕ್ ಉದ್ಘಾಟನೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಅವರು ಪಾರ್ಕ್‍ಗೆ ತೆರಳಿ ಕೊನೆ ಹಂತದ ಪರಿಶೀಲನೆ ನಡೆಸಿದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!