ಆಯುಧ ಪೂಜೆ, ವಿಜಯದಶಮಿ ಹಿನ್ನೆಲೆ ಶಿವಮೊಗ್ಗ ಸಿಟಿ ಜಗಮಗ, ಪ್ರಮುಖ ಕಟ್ಟಡ, ರಸ್ತೆಗೆ ದೀಪಾಲಂಕಾರ

ಶಿವಮೊಗ್ಗ ಲೈವ್.ಕಾಂ | SHIMOGA NEWS | 25 ಅಕ್ಟೋಬರ್ 2020

ಆಯುಧ ಪೂಜೆ ಮತ್ತು ವಿಜಯದಶಮಿಯ ಹಿನ್ನೆಲೆ ಶಿವಮೊಗ್ಗ ನಗರದಾದ್ಯಂತ ದೀಪಾಲಂಕಾರ ಮಾಡಲಾಗಿದೆ. ಪ್ರಮುಖ ರಸ್ತೆಗಳು, ಕಟ್ಟಡಗಳು ಜಗಮಗಗೊಳುತ್ತಿವೆ.

VIDEO REPORT

ಶಿವಮೊಗ್ಗ ಡಿಸಿ ಕಚೇರಿ, ಮಹಾನಗರ ಪಾಲಿಕೆ ಕಟ್ಟಡ, ಶಿವಪ್ಪನಾಯಕನ ಅರಮನೆ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ, ಕೋಟೆ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಇದು ಜನರ ಕಣ್ಸೆಳೆಯುತ್ತಿವೆ.

ಪ್ರಮುಖ ರೋಡುಗಳಾದ ಸವಳಂಗ ರಸ್ತೆಯ ಸ್ವಲ್ಪ ಭಾಗ, ಬಿ.ಹೆಚ್.ರಸ್ತೆ, ಅಮೀರ್ ಅಹಮದ್ ಸರ್ಕಲ್, ಶಿವಪ್ಪನಾಯಕ ಪ್ರತಿಮೆ, ಗಾಂಧಿ ಬಜಾರ್‍, ಕೋಟೆ ರಸ್ತೆಯ ಉದ್ದಕ್ಕೂ ದೀಪಾಲಂಕಾರ ಮಾಡಲಾಗಿದೆ. ರಾತ್ರಿ ವೇಳೆ ದೀಪಾಲಂಕಾರದಿಂದ ರಸ್ತೆಗಳು ಕಂಗೊಳಿಸುತ್ತಿವೆ.

ದಸರಾ ಅಂಗವಾಗಿ ಮಹಾನಗರ ಪಾಲಿಕೆ ವತಿಯಿಂದ ಅಕ್ಟೋಬರ್ 26ರವರೆಗೆ ನಗರದಾದ್ಯಂತ ದೀಪಾಲಂಕಾರ ಮಾಡಲಾಗಿದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!