ಶಿವಮೊಗ್ಗಕ್ಕೆ ಸಿಎಂ ಭೇಟಿ, ಅವರು ಓಡಾಡೋ ರಸ್ತೆಯಲ್ಲಿದ್ದ ಗುಂಡಿಗಳೆಲ್ಲ ಮಂಗಮಾಯ

ಶಿವಮೊಗ್ಗ ಲೈವ್.ಕಾಂ | SHIMOGA NEWS | 25 ಅಕ್ಟೋಬರ್ 2020

ಸ್ಮಾರ್ಟ್‍ ಸಿಟಿ ಕಾಮಗಾರಿ, ಮಳೆಯಿಂದಾಗಿ ಬಾಯ್ತೆರೆದು ಅಪಘಾತಕ್ಕೆ ಕಾರಣವಾಗಿದ್ದ ಪ್ರಮುಖ ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗಿದೆ. ಸಿಎಂ ಯಡಿಯೂರಪ್ಪ ಅವರ ಭೇಟಿಯೇ ಇದಕ್ಕೆ ಕಾರಣ.

ಹೌದು. ಮುಖ್ಯಮಂತ್ರಿ ಯಡಿಯೂರಪ್ಪ ಶಿವಮೊಗ್ಗ ಭೇಟಿ ಹಿನ್ನೆಲೆ, ಅವರು ಸಾಗುವ ಪ್ರಮುಖ ರಸ್ತೆಗಳಲ್ಲಿ ತೇಪೆ ಕಾರ್ಯ ನಡೆಸಿದೆ. ಗುಂಡಿಗಳಿಗೆ ಕಾಂಕ್ರೀಟ್ ತೇಪೆ ಹಾಕಲಾಗಿದೆ. ಸಿಎಂ ಸಂಚರಿಸುವ ಎಲ್ಲಾ ರಸ್ತೆಗಳಲ್ಲಿ ಇದ್ದ ಗುಂಡಿ ನಿನ್ನೆಯೇ ಮಾಯವಾಗಿದೆ.

ಗುಂಡಿಗಳಿಂದಾಗಿ ಜನರು ಸಂಕಷ್ಟಕ್ಕೀಡಾಗಿ, ಅವುಗಳನ್ನು ಮುಚ್ಚುವಂತೆ ಹಲವು ಬಾರಿ ಮನವಿ ಮಾಡಿದರು ಪಾಲಿಕೆ ಕಿವಿಗೆ ಹಾಕಿಕೊಂಡಿರಲಿಲ್ಲ. ಈಗ ದಿಢೀರ್ ಗುಂಡಿಗಳನ್ನು ಮುಚ್ಚಿದೆ. ಆದರೆ ಇದು ತಾತ್ಕಾಲಿಕವಾಗಿದ್ದು, ಕೆಲವೆ ದಿನದಲ್ಲಿ ತೇಪೆ ಕಾರ್ಯವಾದ ಜಾಗದಲ್ಲಿ ಮತ್ತೆ ಗುಂಡಿಗಳು ಪತ್ಯಕ್ಷವಾಗಲಿದೆ. ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!