ಶಿವಮೊಗ್ಗದಲ್ಲಿ ಪಾನಮತ್ತನಾಗಿ ರಸ್ತೆ ಪಕ್ಕ ಮಲಗಿದ್ದವನ ತಲೆ ಮೇಲೆ ಹತ್ತಿದ ವಾಹನ, ಸ್ಥಳದಲ್ಲೇ ಸಾವು

ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 19 ನವೆಂಬರ್ 2020

ಪಾನಮತ್ತನಾಗಿ ರಸ್ತೆ ಪಕ್ಕದಲ್ಲಿ ಮಲಗಿದ್ದ ವ್ಯಕ್ತಿಯ ತಲೆ ಮೇಲೆ ವಾಹನ ಹತ್ತಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ನಾಗರಾಜ್ (63), ಮೃತ ದುರ್ದೈವಿ. ಈತ ಜಟ್‌ಪಟ್ ನಗರದ ನಿವಾಸಿ ಎಂದು ತಿಳಿದು ಬಂದಿದೆ.

ಆಟೋ ಕಾಂಪ್ಲೆಕ್ಸ್‌ಗೆ ಹೋಗುವ ದಾರಿಯಲ್ಲಿ ಶುಭ ಮಂಗಳ ಕಲ್ಯಾಣ ಮಂಟಪ ಸಮೀಪ ಘಟನೆ ಸಂಭವಿಸಿದೆ.

ಪಾನಮತ್ತನಾಗಿದ್ದ ನಾಗರಾಜ್, ರಸ್ತೆ ಬದಿಯಲ್ಲಿ ಮಲಗಿದ್ದ. ಈ ವೇಳೆ ವಾಹನವೊಂದು ಆತನ ತಲೆ ಮೇಲೆ ಹತ್ತಿದೆ. ನಾಗರಾಜ್ ಸ್ಥಳದಲ್ಲಿ ಮೃತಪಟ್ಟಿದ್ದಾನೆ.

ಸರ್ಕಲ್ ಇನ್ಸ್‌ಪೆಕ್ಟರ್ ವಸಂತ ಕುಮಾರ್, ವಿನೋಬನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

Leave a Reply

error: Content is protected !!