ಮುಡುಬ ಸೇತುವೆ ಬಳಿ ಅಪಘಾತ, ಒಬ್ಬ ಸಾವು, ಮತ್ತೊಬ್ಬನಿಗೆ ಗಾಯ, ಜನರ ಆಕ್ರೋಶ

ಶಿವಮೊಗ್ಗ ಲೈವ್.ಕಾಂ |HOSANAGARA NEWS | 21 NOVEMBER 2020

ಹೊಸನಗರ – ಬಟ್ಟೆಮಲ್ಲಪ್ಪ ಮಾರ್ಗದ ಮುಡುಬ ಸೇತುವೆ ಬಳಿ ಅಪಘಾತ ಸಂಭವಿಸಿದ್ದು, ಓರ್ವ ಸವಾರ ಮೃತಪಟ್ಟಿದ್ದು, ಮತ್ತೊಬ್ಬರಿಗೆ ಗಾಯವಾಗಿದೆ. ಘಟನೆ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೇಗಾಯ್ತು ಘಟನೆ?

ಬೈಕ್ ಸವಾರರು ಹಾವೇರಿಯಿಂದ ಹೆಬ್ರಿಗೆ ತೆರಳುತ್ತಿದ್ದ ವೇಳೆ ಅಪಘಾತವಾಗಿದೆ. ಮುಡುಬ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗುಂಡಿಗೆ ಬಿದ್ದಿದೆ. ಘಟನೆಯಲ್ಲಿ ಹಾವೇರಿಯ ರೆಹಮಾನ್ ಸಾಬ್ (22) ಮೃತಪಟ್ಟಿದ್ದಾರೆ. ಅನ್ವರ್ ಬಾಷಾ ಎಂಬುವವರಿಗೆ ಗಾಯವಾಗಿದೆ.

ಸಾರ್ವಜನಿಕರ ಆಕ್ರೋಶ

ಮುಡುಬ ಸೇತುವೆ ಪಕ್ಕದಲ್ಲಿ ಗುಂಡಿ ಇದೆ. ಆದರೆ ರೆಸ್ತೆಯ ಎರಡು ಬದಿಯಲ್ಲಿ ತಡೆಗೋಡೆ, ಎಚ್ಚರಿಕೆ ಫಲಕವಿಲ್ಲ. ಹಾಗಾಗಿ ಈ ಭಾಗದಲ್ಲಿ ಅಪಘಾತಗಳು ಹೆಚ್ಚುತ್ತಿವೆ. ಕೂಡಲೆ ತಡೆಗೋಡೆಗಳನ್ನು ನಿರ್ಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

Leave a Reply

error: Content is protected !!