ಭದ್ರಾವತಿ ಜನ್ನಾಪುರದಲ್ಲಿ ದೇವಸ್ಥಾನದ ಬಳಿಯೇ ಮದ್ಯದ ಅಂಗಡಿ, ತೆರವಿಗೆ ಒತ್ತಾಯ

ಶಿವಮೊಗ್ಗ ಲೈವ್.ಕಾಂ |SHIMOGA / BHADRAVATHI NEWS | 21 NOVEMBER 2020

ಭದ್ರಾವತಿಯ ಜನ್ನಾಪುರದಲ್ಲಿ ದೇವಸ್ಥಾನದ ಸಮೀಪದಲ್ಲಿ ಮದ್ಯದ ಅಂಗಡಿ ನಡೆಸಲಾಗುತ್ತಿದೆ. ಅದನ್ನ ಬಂದ್ ಮಾಡಿಸಬೇಕು ಎಂದು ಕರ್ನಾಟಕ ಜನಸೈನ್ಯ ಜಿಲ್ಲಾಧ್ಯಕ್ಷ ಮಂಜುನಾಥ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ್, ಜನ್ನಾಪುರದ ಅಂತರಘಟ್ಟಮ್ಮ ದೇವಸ್ಥಾನವಿದೆ. ಅದರ ಸಮೀಪದಲ್ಲೇ ಮದ್ಯದ ಅಂಗಡಿ ಇದೆ. ಇಲ್ಲಿ ಮದ್ಯ ಮಾರಾಟಕ್ಕಷ್ಟೆ ಅವಕಾಶವಿದೆ. ಆದರೆ ಅಲ್ಲಿಯೇ ಕುಳಿತು ಕುಡಿಯುವ ವ್ಯವಸ್ಥೆ ಮಾಡಲಾಗಿದೆ. ಈ ಕುರಿತು ಅಬಕಾರಿ ಇಲಾಖೆಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಹಾಗಾಗಿ ದೇವಸ್ಥಾನಕ್ಕೆ ಹೋಗುವವರಿಗೆ ತೊಂದರೆ ಆಗುತ್ತಿದೆ ಎಂದು ಆರೋಪಿಸಿದರು.

ಸಂಘದ ಗೌರವ ಅಧ್ಯಕ್ಷ ಅನಿಲ್, ಮಹಿಳಾ ಘಟಕದ ಜಿಲ್ಲಾಧ್ಯ್ಕಷ ಹನುಮಮ್ಮ, ಕಾನೂನು ಸಲಹೆಗಾರ ನಾರಾಯಣ ಸ್ವಾಮಿ, ಮಾನವ ಹಕ್ಕುಗಳ ಹೋರಾಟ ಸಮಿತಿಯ ಬಿ.ಎನ್.ರಾಜು ಸುದ್ದಿಗೋಷ್ಠಿಯಲ್ಲಿದ್ದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

Leave a Reply

error: Content is protected !!