ಸಾಗರಕ್ಕೆ ತೆರಳುತ್ತಿದ್ದ ಕಾರು ಅಡ್ಡಗಟ್ಟಿ ಲಕ್ಷಾಂತರ ರುಪಾಯಿ ದರೋಡೆ

ಶಿವಮೊಗ್ಗ ಲೈವ್.ಕಾಂ |SORABA NEWS | 26 NOVEMBER 2020

ಮುಂಬೈನಿಂದ ಸಾಗರಕ್ಕೆ ಬರುತ್ತಿದ್ದ ಕಾರು ಅಡ್ಡಗಟ್ಟಿ ಲಕ್ಷಾಂತರ ರುಪಾಯಿ ಹಣ ದೋಚಲಾಗಿದೆ. ಸಾಗರದ ಉದ್ಯಮಿಯೊಬ್ಬರಿಗೆ ಈ ಹಣ ಸೇರಿತ್ತು ಎಂದು ಹೇಳಲಾಗುತ್ತಿದೆ.

ಹೇಗಾಯ್ತು ಘಟನೆ?

ಮುಂಬೈನಿಂದ ಹಣ ತೆಗೆದುಕೊಂಡು ಸ್ವಿಫ್ಟ್ ಕಾರಿನಲ್ಲಿ ಬರಲಾಗುತ್ತಿತ್ತು. ಸೊರಬ ತಾಲೂಕು ತವನಂದಿ ಗ್ರಾಮದ ಬಳಿ ಗುಂಪೊಂದು ಕಾರನ್ನು ಅಡ್ಡಗಟ್ಟಿದೆ. ಕಾರಿನ ಚಾಲಕ ಮತ್ತು ಆತನ ಜೊತೆಗಿದ್ದ ಮತ್ತೊಬ್ಬನಿಗೆ ಥಳಿಸಲಾಗಿದೆ. ಕಾರಿನಲ್ಲಿದ್ದ ಲಕ್ಷಾಂತರ ರುಪಾಯಿ ಹಣವನ್ನು ದೋಚಲಾಗಿದೆ.

ಸಾಗರಕ್ಕೆ ಬರುತ್ತಿತ್ತು ಕಾರು

ಕಾರು ಮುಂಬೈನಿಂದ ಸಾಗರಕ್ಕೆ ಬರುತ್ತಿತ್ತು. ಸಾಗರದಲ್ಲಿ ಇರುವ ಉದ್ಯಮಿಯೊಬ್ಬರಿಗೆ ಈ ಹಣ ಸೇರಿತ್ತು ಎಂದು ಹೇಳಲಾಗುತ್ತಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆನವಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

Leave a Reply

error: Content is protected !!