ಭದ್ರಾವತಿ ಜನ್ನಾಪುರದಲ್ಲಿ ಮನೆ ಬಾಗಿಲು ಮುರಿದು ಚಿನ್ನಾಭರಣ, ಹಣ ಕಳ್ಳತನ

ಶಿವಮೊಗ್ಗ ಲೈವ್.ಕಾಂ |BHADRAVATHI NEWS | 26 NOVEMBER 2020

ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ. 1.10 ಲಕ್ಷ ಮೌಲ್ಯದ ಚಿನ್ನಾಭರಣ, 20 ಸಾವಿರ ನಗದು ದೋಚಲಾಗಿದೆ.

ಭದ್ರಾವತಿಯ ಜನ್ನಾಪುರದ ಕುರುಬರ ಬೀದಿಯ ಕೆ.ಸಿ.ರಾಮಚಂದ್ರ ಅವರ ಮನೆಯಲ್ಲಿ ಕಳ್ಳತನವಾಗಿದೆ. ಪತ್ನಿಯ ಚಿಕಿತ್ಸೆಗಾಗಿ ರಾಮಚಂದ್ರ ಅವರು ಬೆಂಗಳೂರಿಗೆ ತೆರಳಿದ್ದರು. ಹಿಂತಿರುಗಿ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಇಂಟರ್‍ಲಾಕ್‍ ಮುರಿದ ಕಳ್ಳರು

ಮನೆಯ ಕೊಠಡಿಯಲ್ಲಿದ್ದ ಬೀರುವಿನ ಇಂಟರ್‍ಲಾಕ್‍ ಮುರಿದಿರುವ ಕಳ್ಳರು 20 ಸಾವಿರ ರೂ. ನಗದು ಕದ್ದಿದ್ದಾರೆ. ಮತ್ತೊಂದು ಕೊಠಡಿಯಲ್ಲಿದ್ದ ಬೀರುವಿನ ಬಾಗಿಲು ಮುರಿದು, 30 ಗ್ರಾಂ ಬಂಗಾರದ ಬಳೆ, 15 ಸಾವಿರ ರೂ. ಮೌಲ್ಯದ ಬಂಗಾರದ ಸರ, 10 ಗ್ರಾಂನ ಉಂಗುರವನ್ನು ಕದ್ದೊಯ್ದಿದ್ದಾರೆ. ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

Leave a Reply

error: Content is protected !!