ಗೋಡೆ, ಕಂಬಗಳು, ಕಿಟಕಿ ಗ್ಲಾಸ್‌ಗಳ ಮೇಲೆ ಪೋಸ್ಟರ್‌ಗಳು, ಶಿವಮೊಗ್ಗ ಡಿಸಿ ಕಚೇರಿಯಲ್ಲಿ ಇದೆಂಥಾ ಅವಸ್ಥೆ?

ಶಿವಮೊಗ್ಗ ಲೈವ್.ಕಾಂ |SHIMOGA NEWS | 27 NOVEMBER 2020

ಇಲ್ಲಿ ಗೋಡೆಯೇ ನೊಟೀಸ್ ಬೋರ್ಡು. ಕಟ್ಟಡದ ಕಂಬಗಳ ಮೇಲೆ ರಾರಾಜಿಸುತ್ತಿವೆ ಸರ್ಕಾರದ ಯೋಜನೆಯ ಭಿತ್ತಿ ಪತ್ರಗಳು.

ಇದು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯ ದುಸ್ಥಿತಿ. ಡಿಸಿ ಕಚೇರಿಯಲ್ಲಿ ಒಳಗೆ ಕಾಲಿಡುವವರನ್ನ ಮೊದಲು ಸ್ವಾಗತಿಸುವುದೆ ಗೋಡೆಗಳ ಮೇಲಿನ ಪೋಸ್ಟರ್‍ಗಳು. ಪ್ರವೇಶದ್ವಾರದಲ್ಲಿ ಎದುರಾಗುವ ಎರಡು ಕಂಬಗಳ ಮೇಲೆ ಭಿತ್ತಿ ಪತ್ರಗಳು ಕಾಣಿಸುತ್ತವೆ.

  • ಕಂಬಗಳ ಮೇಲೆ ಹಲವು ಬಾರಿ ಕರಪತ್ರಗಳನ್ನು ಅಂಟಿಸಲಾಗಿದೆ. ಅದರ ಕುರುಹುಗಳು ಹಾಗೆ ಉಳಿದುಕೊಂಡಿವೆ.
  • ಪಕ್ಕದ ಗೋಡೆಗಳ ಮೇಲೆ ಸಾಲು ಸಾಲು ಪೋಸ್ಟರ್‍ಗಳನ್ನು ಅಂಟಿಸಲಾಗಿದೆ.
  • ಡಿಸಿ ಕಚೇರಿಯ ಕಿಟಕಿ ಗಾಜುಗಳು ಕೂಡ ಇದರಿಂದ ಹೊರತಾಗಿಲ್ಲ. ಇಲ್ಲಿಯೂ ಭಿತ್ತಿ ಪತ್ರಗಳು ರಾರಾಜಿಸುತ್ತವೆ.

ಸರ್ಕಾರಿ ಕಾರ್ಯಕ್ರಮಗಳದ್ದೇ ಭಿತ್ತಿಪತ್ರ

ಇಲ್ಲಿ ಕಾಣಿಸುವ ಎಲ್ಲಾ ಭಿತ್ತಿ ಪತ್ರಗಳು ಸರ್ಕಾರಿ ಕಾರ್ಯಕ್ರಮಗಳದ್ದೇ ಆಗಿದೆ. ಸರ್ಕಾರದ ಪ್ರಮುಖ ಯೋಜನೆಗಳು, ಹೊಸ ಕಾರ್ಯಕ್ರಮಗಳ ವಿವರಗಳು ಇರುವ ಪೋಸ್ಟರ್‍ಗಳನ್ನು, ಮಾಹಿತಿಯನ್ನು ಇಲ್ಲಿ ಅಂಟಿಸಲಾಗಿದೆ.

ನೊಟೀಸ್‍ ಬೋರ್ಡುಗಳೇಕೆ ಇಲ್ಲ

ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿ ಹುಡುಕಿದರೂ ಸಿಗೋದು ಎರಡು ಅಥವಾ ಮೂರು ನೊಟೀಸ್ ಬೋರ್ಡುಗಳಷ್ಟೇ. ಜಿಲ್ಲಾಧಿಕಾರಿ ಕೊಠಡಿ, ಅಪರ ಜಿಲ್ಲಾಧಿಕಾರಿ ಕೊಠಡಿ ಬಳಿಗೊಂದು ಸಣ್ಣ ನೊಟೀಸ್ ಬೋರ್ಡಿದೆ. ಇದರಲ್ಲಿ ಕೆಲವು ಮಾಹಿತಿಗಳನ್ನು ಪ್ರಕಟಿಸಲಾಗಿದೆ. ಮತ್ತಿನ್ನೆಲ್ಲ ಕಡೆಯು ಗೋಡೆಗಳು, ಕಂಬಗಳು, ಕಿಟಕಿ ಗ್ಲಾಸ್ ಮೇಲೆಯೇ ಭಿತ್ತಿ ಪತ್ರಗಳನ್ನು ಅಂಟಿಸಲಾಗಿದೆ.

VIDEO REPORT

ಇಲ್ಲಿ ಉಗುಳುವಂತಿಲ್ಲ..!

ಕಟ್ಟಡದ ತುಂಬೆಲ್ಲ ‘ಇಲ್ಲಿ ಉಗುಳುವಂತಿಲ್ಲ’ ಎಂಬ ಸೂಚನಾ ಫಲಕಗಳಿವೆ. ಎಲ್ಲೆಂದರಲ್ಲಿ ಉಗುಳುವುದರಿಂದ ರೋಗ ಹರಡುತ್ತದೆ. ಅಲ್ಲದೆ ಕಟ್ಟಡದ ಅಂದವು ಹಾಳಾಗುತ್ತದೆ. ಭಿತ್ತಿ ಪತ್ರ ಅಂಟಿಸಿದರೂ ಕಟ್ಟಡದ ಅಂದ ಹಾಳಾಗುತ್ತದೆ. ಕಚೇರಿಯ ಗಂಭೀರತೆಗು ಕುಂದುಂಟಾಗುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರು ಗಮನ ಹರಿಸುವ ಅಗತ್ಯವಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

Leave a Reply

error: Content is protected !!