SHIMOGA CRIME | ಮಹಿಳೆಯರೆ ಎಚ್ಚರ, ಕೊರಳಲ್ಲಿರುವ ಸರ, ಮಾಂಗಲ್ಯ ಭದ್ರ, ನಗರಕ್ಕೆ ಮತ್ತೆ ಬಂತಾ ಪಲ್ಸರ್ ಗ್ಯಾಂಗ್?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

(FILE PHOTO)

ಶಿವಮೊಗ್ಗ ಲೈವ್.ಕಾಂ | SHIMOGA NEWS | 04 FEBRUARY 2021

ಶಿವಮೊಗ್ಗದಲ್ಲಿ ಮತ್ತೆ ಪಲ್ಸರ್ ಗ್ಯಾಂಗ್ ಭೀತಿ ಶುರುವಾಗಿದೆ. ಮಹಿಳೆಯರ ಕೊರಳಿಗೆ ಕೈ ಹಾಕಿ ಚಿನ್ನದ ಸರ, ಮಾಂಗಲ್ಯ ಕದ್ದೊಯ್ಯುವ ಗ್ಯಾಂಗ್ ಪುನಃ ರಸ್ತೆಗಿಳಿದ ಶಂಕೆ ಇದೆ.

ಸಾಲು ಸಾಲು ಸರಗಳ್ಳತನ

ಸ್ಥಳ : ವಿದ್ಯಾನಗರ | ದಿನಾಂಕ ಫೆಬ್ರವರಿ 2 | ಸಮಯ ಸಂಜೆ 7ಕ್ಕೆ

ಸಿಗರೇಟ್ ಕೇಳಿಕೊಂಡು ವ್ಯಕ್ತಿಯೊಬ್ಬ ಅಂಗಡಿಗೆ ಬಂದಿದ್ದ. ಅಂಗಡಿಯಲ್ಲಿದ್ದ ಮಹಿಳೆಯ ಕೊರಳಲ್ಲಿದ್ದ 1.50 ಲಕ್ಷ ಮೌಲ್ಯದ 35 ಗ್ರಾಂ ಚಿನ್ನದ ಸರವನ್ನು ಎಳೆದೊಯ್ದಿದ್ದಾನೆ. ಬೈಕ್‍ನಲ್ಲಿ  ಬಂದಿದ್ದ ಮತ್ತೊಬ್ಬ ವ್ಯಕ್ತಿ ಸರಗಳ್ಳನಿಗೆ ನೆರವಾಗಿದ್ದ.

ಇದನ್ನೂ ಓದಿ  | ವಿಮಾನದಲ್ಲಿ ಬಂದು ಶಿವಮೊಗ್ಗದಲ್ಲಿ ಸರಗಳ್ಳತನ ಮಾಡುತ್ತಿದ್ದ ಆರೋಪಿ ಸೇರಿ ಆರು ಮಂದಿ ಅರೆಸ್ಟ್

ಸ್ಥಳ : ಕೋಟೆ ರಸ್ತೆ | ದಿನಾಂಕ ಜನವರಿ 31 | ಸಮಯ 7.15

ಕೋಟೆ ರಸ್ತೆಯಲ್ಲಿರುವ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿನಿಯರ ವಸತಿ ನಿಲಯದ ಬಳಿ ಮಹಿಳೆಯೊಬ್ಬರ ಮಾಂಗಲ್ಯ ಕಿತ್ತೊಯ್ಯಲಾಗಿದೆ. ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಕಡೆಯಿಂದ ಮಲ್ಲೇಶ್ವರ ನಗರದ ಮನೆ ಕಡೆಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ.

ಇದನ್ನೂ ಓದಿ  | ನಾಲ್ವರು ಸರಗಳ್ಳರು ಅರೆಸ್ಟ್, 2.64 ಲಕ್ಷ ಮೌಲ್ಯದ ಆಭರಣ ವಶಕ್ಕೆ, ಕಳ್ಳರು ಸಿಕ್ಕಿಬಿದ್ದಿದ್ದು ಹೇಗೆ?

ವಿಶೇಷ ಗಸ್ತು, ಚೆಕ್ ಪಾಯಿಂಟ್‍ಗಳು

ಸರಗಳ್ಳತನ ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ವಿಶೇಷ ಗಸ್ತು ಮತ್ತು ಚೆಕ್ ಪಾಯಿಂಟ್‍ಗಳನ್ನು ಮಾಡಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು, ಗಸ್ತು, ಚೆಕ್ ಪಾಯಿಂಟ್‍ಗಳನ್ನು ಸ್ಥಾಪಿಸಲಾಗಿದೆ. ತಮ್ಮ ಸುತ್ತಮುತ್ತ ಹೊಸದಾಗಿ ಬಾಡಿಗೆ ಅಥವಾ ಕೆಲವು ದಿನಕ್ಕಾಗಿ ಎಂದು ರೂಂಗಳನ್ನು ಲೀಸ್‍ಗೆ ಪಡೆದು ಯಾರಾದರೂ ಬಂದಿದ್ದರೆ ಅವರ ಮಾಹಿತಿಯನ್ನು ಸಾರ್ವಜನಿಕರು ಪೊಲೀಸರಿಗೆ ಒದಗಿಸಬೇಕು. ಲಾಡ್ಜ್‍ಗೆ ಬರುವವರ ಮಾಹಿತಿಯನ್ನು ಈಗಾಗಲೇ ಪಡೆದುಕೊಳ್ಳಲಾಗುತ್ತಿದೆ. ಈ ಹಿಂದೆ ಅಂತಾರಾಜ್ಯ ಗ್ಯಾಂಗ್ ಒಂದನ್ನು ಕೋಟೆ ಠಾಣೆ ವ್ಯಾಪ್ತಿಯಲ್ಲಿ ಸೆರೆ ಹಿಡಿಯಲಾಗಿತ್ತು. ಈಗ ಸರಗಳ್ಳತನ ಮಾಡಿರುವವರನ್ನು ಬಂಧಿಸಲಾಗುತ್ತದೆ ಎಂದು ತಿಳಿಸಿದರು.

ಮತ್ತೆ ಬಂತಾ ಪಲ್ಸರ್ ಗ್ಯಾಂಗ್?

ಬೆಂಗಳೂರು ಸೇರಿದಂತೆ ವಿವಿಧೆಡೆ ಪಲ್ಸರ್ ಗ್ಯಾಂಗ್‍ ಸರಗಳ್ಳತನದಲ್ಲಿ ತೊಡಗಿಸಿಕೊಂಡಿದೆ. ಶಿವಮೊಗ್ಗದಲ್ಲಿ ನಡೆದ ಸರಗಳ್ಳತನದಲ್ಲಿ ಪಲ್ಸರ್ ಬೈಕ್ ಇರುವ ಅನುಮಾನ ಮೂಡಿದೆ. ಹಾಗಾಗಿ ಶಿವಮೊಗ್ಗಕ್ಕೆ ಮತ್ತೆ ಪಲ್ಸರ್ ಗ್ಯಾಂಗ್ ಬಂದಿರುವ ಶಂಕೆ ವ್ಯಕ್ತವಾಗಿದೆ. ಕೋಟೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದು, ಮಹಿಳೆಯರು ಎಚ್ಚರ ವಹಿಸುವಂತೆ ಸೂಚಿಸಲಾಗಿದೆ.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : February 4, 2021

Leave a Comment