ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 18 ಜುಲೈ 2020
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ದಾಖಲೆ ಪ್ರಮಾಣದಲ್ಲಿ ಸೋಂಕಿತರು ಗುಣಮುಖವಾಗಿದ್ದಾರೆ. ಇದು ಜಿಲ್ಲೆಯ ಜನರಲ್ಲಿ ತುಸು ನೆಮ್ಮದಿ ಮೂಡಿಸಿದ್ದರೆ, ಪಾಸಿಟಿವ್ ಬಂದವರ ಸಂಖ್ಯೆಯು ಹೆಚ್ಚಳವಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಇವತ್ತು ಎಷ್ಟು ಮಂದಿ ಗುಣವಾದರು?
ಶಿವಮೊಗ್ಗದಲ್ಲಿ ಕರೋನದಿಂದ ಗುಣವಾಗಿ ಒಂದೇ ದಿನ 83 ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರಿಂದ ಒಟ್ಟು ಗುಣವಾದವರ ಸಂಖ್ಯೆ 400ಕ್ಕೆ ಏರಿಕೆಯಾಗಿದೆ. ಇದು ಜಿಲ್ಲೆಯ ಜನರು ಸಮಾಧಾನ ಪಟ್ಟುಕೊಳ್ಳುವಂತೆ ಮಾಡಿದೆ.
ಇವತ್ತೆಷ್ಟು ಮಂದಿಗೆ ಸೋಂಕು ತಗುಲಿದೆ?
ಒಂದೆಡೆ ದೊಡ್ಡ ಸಂಖ್ಯೆಯಲ್ಲಿ ಸೋಂಕಿತರು ಗುಣವಾಗುತ್ತಿದ್ದರೆ, ಮತ್ತಷ್ಟು ಮಂದಿಗೆ ಪಾಸಿಟವ್ ಬಂದಿದೆ. ಇವತ್ತು 49 ಮಂದಿಗೆ ಕರೊನ ಪಾಸಿಟಿವ್ ಬಂದಿದೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 811ಕ್ಕೆ ಏರಿಕೆಯಾಗಿದೆ.
ತಾಲೂಕುವಾರು ರಿಪೋರ್ಟ್
ಇವತ್ತಿನ 49 ಪಾಸಿಟಿವ್ ಪ್ರಕರಣಗಳ ಪೈಕಿ ಶಿವಮೊಗ್ಗ ತಾಲೂಕಿನಲ್ಲಿ 19 ಮಂದಿ, ಭದ್ರಾವತಿಯ ಒಬ್ಬರು, ಸಾಗರದ 4, ಶಿಕಾರಿಪುರದ 16, ತೀರ್ಥಹಳ್ಳಿಯ 7 ಮಂದಿಗೆ ಸೋಂಕು ತಗುಲಿದೆ. ಇನ್ನು, ಚಿಕ್ಕಮಗಳೂರಿನಿಂದ ಬಂದಿದ್ದ ಒಬ್ಬರು ಮತ್ತು ಚಿತ್ರದುರ್ಗದಿಂದ ಬಂದಿದ್ದ ಒಬ್ಬರಿಗೆ ಕರೋನ ಸೋಂಕು ತಗುಲಿದೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಲಾಗಿದೆ.
ಓದುಗರ ಗಮನಕ್ಕೆ : ಕೋವಿಡ್ ಸೋಂಕಿತರ ಕುರಿತು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಪ್ರತ್ಯೇಕವಾಗಿ ವರದಿ ಬಿಡುಗಡೆ ಮಾಡುತ್ತಿವೆ. ರಾಜ್ಯ ಸರ್ಕಾರದ ವರಿಯದಲ್ಲಿ ಅಂಕಿ, ಸಂಖ್ಯೆಗಳು ನಿಧಾನವಾಗಿ ಪ್ರಕಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಒದಗಿಸುತ್ತಿರುವ ವರದಿ ಆಧಾರದಲ್ಲಿ ವರದಿ ಪ್ರಕಟಿಸಲಾಗುತ್ತಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]