KSRTC ಬಸ್ ಪ್ರಯಾಣ ದರ ಹೆಚ್ಚಳ, ಶಿವಮೊಗ್ಗದಿಂದ ಯಾವ್ಯಾವ ಊರಿಗೆ ಎಷ್ಟಾಗುತ್ತೆ ಗೊತ್ತಾ ಟಿಕೆಟ್ ರೇಟ್?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 28 ಫೆಬ್ರವರಿ 2020

ರಾಜ್ಯ ರಸ್ತೆ ಸಾರಿಗೆ ನಿಗಮವು ಬಸ್ ಪ್ರಯಾಣ ದರವನ್ನು ಶೇ.12ರಷ್ಟು ಏರಿಕೆ ಮಾಡಿದ ಬಳಿಕ ಶಿವಮೊಗ್ಗದಿಂದ ರಾಜಧಾನಿ ಬೆಂಗಳೂರಿನ ಪ್ರಯಾಣದ ದರ ಏಕಾಏಕಿ 31 ರೂ. ಮತ್ತು ಮೈಸೂರಿಗೆ 35 ರೂ. ಹೆಚ್ಚಳವಾಗಿದೆ.

KSRTC Bus Stand 1 1

ಬೆಂಗಳೂರಿಗೆ ವೇಗದೂತ ಬಸ್ ಪ್ರಯಾಣ ದರ 257 ರೂ. ಇತ್ತು. ಮಂಗಳವಾರ ಮಧ್ಯರಾತ್ರಿಯಿಂದ ಪ್ರಯಾಣ ದರವು 288 ರೂ.ಗಳಿಗೆ ಏರಿಕೆಯಾಗಿದೆ. ಅಂದರೆ ಶಿವಮೊಗ್ಗ- ಬೆಂಗಳೂರು ನಡುವಿನ ಪ್ಯಾಸೆಂಜರ್ ರೈಲು ಪ್ರಯಾಣ ದರದ ಅರ್ಧದಷ್ಟು ದರ ಹೆಚ್ಚಳವಾಗಿದೆ. ಪ್ಯಾಸೆಂಜರ್‌ ರೈಲಿನಲ್ಲಿ ಈ ನಗರಗಳ ನಡುವಿನ ಪ್ರಯಾಣ ದರ ಕೇವಲ 60 ರೂ.

ಶಿವಮೊಗ್ಗದಿಂದ ಮೈಸೂರಿಗೆ 228 ರೂ.ಗಳಿಂದ 263 ರೂ.ಗಳಿಗೆ ಏರಿಕೆಯಾಗಿದೆ. ಭದ್ರಾವತಿಗೆ 3 ರೂ. ಹೊನ್ನಾಳಿಗೆ 6 ರೂ., ಸಾಗರಕ್ಕೆ 10 ರೂ. ಏರಿಕೆಯಾಗಿದೆ.

88056284 1062969197397833 7297510273286406144 o.jpg? nc cat=100& nc sid=8024bb& nc ohc=aeHz1pE9NW8AX QAFsk& nc ht=scontent.fblr11 1

ಗ್ರಾಮೀಣ ಪ್ರದೇಶದಲ್ಲಿ ಸೀಮಿತ ದೂರದ ಪ್ರಯಾಣ ದರಕ್ಕೆ ಅಲ್ಪ ವಿನಾಯಿತಿ ನೀಡಲಾಗಿದೆ. ಅಂದರೆ ಮೊದಲ 3 ಕಿ.ಮೀ. ಪ್ರಯಾಣಕ್ಕೆ 7 ರೂ. ಇದ್ದ ದರವನ್ನು 5 ರೂ.ಗೆ ಇಳಿಕೆ ಮಾಡಲಾಗಿದ್ದು 2 ರೂ. ಕಡಿತ ಮಾಡಲಾಗಿದೆ.

ಸಾಮಾನ್ಯ ಸಾರಿಗೆ ಬಸ್‌ಗಳಲ್ಲಿ ಮೊದಲ 15 ಕಿ.ಮೀ. ಪ್ರಯಾಣ ದರವನ್ನು ಹೆಚ್ಚಿಸಿಲ್ಲ. ಆದರೆ, ಶಿವಮೊಗ್ಗದಂತಹ ನಗರದ ಪ್ರದೇಶದಲ್ಲಿ ಗ್ರಾಮೀಣ ಸಾರಿಗೆಯ ಬಸ್‌ಗಳಲ್ಲಿ ಮೊದಲ 3 ಕಿ.ಮೀ. ಪ್ರಯಾಣ ದರ ವಿನಾಯಿತಿ ಅನ್ವಯವಾಗುವುದು ಬಹಳ ಕಡಿಮೆ. ಯಾಕೆಂದರೆ ಶಿವಮೊಗ್ಗದಿಂದ ಗ್ರಾಮಾಂತರ ಆರಂಭವಾಗುವುದೇ 4 ಕಿ.ಮೀ. ಬಳಿಕ.

https://www.facebook.com/liveshivamogga/videos/785855155231900/?t=4

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : February 28, 2020

Leave a Comment