ಶಿವಮೊಗ್ಗ ಲೈವ್.ಕಾಂ | SAGARA | 9 ಮಾರ್ಚ್ 2020
ಕರೋನ ವೈರಸ್ ಭೀತಿ ಹಿನ್ನೆಲೆ ನರಸೀಪುರದ ಖ್ಯಾತ ನಾಟಿ ವೈದ್ಯ ನಾರಾಯಣ ಮೂರ್ತಿ ಅವರು ಗಿಡಮೂಲಿಕೆ ಔಷಧಿ ಕೊಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಆದರೂ ಕೆಲವರು ನಾರಾಯಣಮೂರ್ತಿ ಅವರ ಹೆಸರಲ್ಲಿ ನಕಲಿ ಔಷಧಿ ವಿತರಿಸುತ್ತಿರುವುದನ್ನು ಖಂಡಿಸಿ, ನರಸೀಪುರದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ನರಸೀಪುರದಲ್ಲಿ ನಾಟಿ ವೈದ್ಯ ನಾರಾಯಣ ಮೂರ್ತಿ ಅವರು ವಿವಿಧ ಕಾಯಿಲೆಗೆ ನಾಟಿ ಔಷಧಿ ನೀಡುತ್ತಾರೆ. ಈ ದಿನಗಳಲ್ಲಿ ನರಸೀಪುರಕ್ಕೆ ರಾಜ್ಯ ಮತ್ತು ಹೊರ ರಾಜ್ಯದ ಹಲವು ಭಾಗದಿಂದ ಸಾವಿರಾರು ಜನರು ಬಂದು ಔಷಧಿ ಪಡೆಯುತ್ತಾರೆ. ಕರೋನ ವೈರಸ್ ಭೀತಿ ಹಿನ್ನೆಲೆ, ಔಷಧಿ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ನಕಲಿ ಔಷಧ ಹಾವಳಿ
ಔಷಧ ನೀಡುವುದು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದರೂ, ಭಾನುವಾರ ದೊಡ್ಡ ಸಂಖ್ಯೆಯಲ್ಲಿ ಜನರು ಬಂದಿದ್ದರು. ಕೆಲವರು ಇವರಿಗೆ ನಕಲಿ ಔಷಧಿ ವಿತರಣೆ ಮಾಡುತ್ತಿದ್ದರು. ಈ ಬೆಳವಣಿಗೆ ಖಂಡಿಸಿ, ಗ್ರಾಮಸ್ಥರು ರಸ್ತೆ ತಡೆ ನಡೆಸಿದರು. ಬೇರೆ ಬೇರೆ ಕಡೆಯಿಂದ ಬಂದಿದ್ದವರ ವಾಹನಗಳನ್ನು ತಡೆಯಲಾಯಿತು. ಇದರಿಂದ ಕೆಲಕಾಲ ಸ್ಥಳದಲ್ಲಿ ಗೊಂದಲ ನಿರ್ಮಾಣವಾಗಿತ್ತು.
ಹತ್ತು ಹನ್ನೆರಡು ದಿನದಿಂದ ಸ್ಥಗಿತ
ಈ ನಡುವೆ ಮಾಧ್ಯಮಗಳ ಜೊತೆ ಮಾತನಾಡಿದ ನಾರಾಯಣ ಮೂರ್ತಿ ಅವರು, 10 – 12 ದಿನದ ಹಿಂದೆಯೆ ಔಷಧಿ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ. ಈ ಕುರಿತು ನಾಮಫಲಕದ ಮೂಲಕ ಸೂಚಿಸಲಾಗಿದೆ. ಆದರೂ ಜನರು ಬರುತ್ತಿದ್ದಾರೆ. ನಮ್ಮ ಕುಟುಂಬದಲ್ಲಿ ಔಷಧಿ ನೀಡುತ್ತಿಲ್ಲ. ಕೆಲವರು ಹಣದ ಆಸೆಗೆ ನಕಲಿ ಔಷಧ ಕೊಡುತ್ತಿದ್ದಾರೆ ಎಂದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200