ಶಿವಮೊಗ್ಗ ಲೈವ್.ಕಾಂ | SHIMOGA | 7 ಮೇ 2020
ಕಿಡಿಗೇಡಿಗಳಿಂದಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಮ್ಮೆ ಕರೋನ ಆತಂಕ ಸೃಷ್ಟಿಯಾಗಿದೆ. ಜಿಲ್ಲೆಯಲ್ಲಿ ಇಬ್ಬರು ಮಕ್ಕಳಿಗೆ ಕರೋನ ಬಂದಿದೆ ಎಂದು ಭಯ ಬೆಳೆದಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಫೋಟೊ ಒಂದರಿಂದಾಗಿ ಈ ಭೀತಿ ಹುಟ್ಟಿಕೊಂಡಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕಿಡಿಗೇಡಿಗಳು ಮಾಡಿದ್ದೇನು?
ನ್ಯೂಸ್ ಚಾನೆಲ್ ಒಂದರಲ್ಲಿ ಪ್ರಸಾರವಾಗಿರುವ ವರದಿಯೊಂದನ್ನು ವಾಟ್ಸಪ್, ಫೇಸ್‌ಬುಕ್ ಮೂಲಕ ಷೇರ್ ಮಾಡಲಾಗಿದೆ. ಇದು ವೈರಲ್ ಆಗಿದ್ದು, ಆತಂಕ ಹೆಚ್ಚುತ್ತಲೇ ಇದೆ. ಕಿಡಿಗೇಡಿಗಳು ಕೆಲವೆ ಸೆಕೆಂಡ್‌ನ ವರದಿಯನ್ನು ಹಂಚಿಕೊಂಡಿದ್ದಾರೆ. ಇದು ಅನುಮಾನ ಮತ್ತು ಆತಂಕ ಹೆಚ್ಚಲು ಕಾರಣವಾಗಿದೆ.
ನಿಜಕ್ಕೂ ಆಗಿರುವುದು ಏನು?
ಏಪ್ರಿಲ್ ತಿಂಗಳ ಆರಂಭದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಇಬ್ಬರು ಮಕ್ಕಳಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು. ಹೊರ ರಾಜ್ಯದಿಂದ ಬಂದಿದ್ದ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಇದೇ ಕಾರಣಕ್ಕೆ ಐಸೊಲೇಷನ್ ವಾರ್ಡ್‌ನಲ್ಲಿ ಇರಿಸಲಾಗಿತ್ತು. ಇದರ ವರದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಆ ವರದಿಯ ವಿಡಿಯೋದ ಆರಂಭದ ೧೫ ಸೆಕೆಂಡನ್ನು ಕಟ್ ಮಾಡಿ ಎಲ್ಲೆಡೆ ಷೇರ್ ಮಾಡಲಾಗಿದೆ.
ಎರಡನೆ ಬಾರಿ ಇದೆ ಆತಂಕ
ಕಳೆದ ವಾರ ಇದೇ ವರದಿಯ ವಿಡಿಯೋ ಶೇರ್ ಮಾಡಲಾಗಿತ್ತು. ಈಗ ವರದಿಯ ಇಮೇಜ್ ಒಂದನ್ನು ಮಾತ್ರ ಷೇರ್ ಮಾಡಲಾಗುತ್ತಿದೆ. ಇದು ಆತಂಕ ಮೂಡಿಸಿದೆ. ಆದರೆ ಶಿವಮೊಗ್ಗದಲ್ಲಿ ಈತನಕ ಯಾವುದೇ ಪಾಸಿಟಿವ್ ಪ್ರಕರಣಗಳು ಇಲ್ಲ. ಎರಡು ಸಾವಿರಕ್ಕೂ ಹೆಚ್ಚು ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ. ದಿನೇ ದಿನೇ ತಪಾಸಣೆ ಪ್ರಮಾಣ ಹೆಚ್ಚಳ ಮಾಡಲಾಗುತ್ತಿದೆ. ಮೇ 6ರ ತನಕ ಎಷ್ಟು ಮಂದಿ ತಪಾಸಣೆ ಮಾಡಲಾಗಿದೆ. ಕೆಳಗಿರುವ ಲಿಂಕ್ ಕ್ಲಿಕ್ ಮಾಡಿ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]