ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಮೇ 2020
ಶಿವಮೊಗ್ಗ ಪೊಲೀಸ್ ಇಲಾಖೆಗೆ ಕರೋನ ಸೋಂಕಿನ ಬಿಸಿ ತಟ್ಟಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿ ಹಲವರನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಈ ನಡುವೆ ಬೆಂಗಳೂರಿನಿಂದ ನೂತನ ಪೊಲೀಸರನ್ನು ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ರಾತ್ರೋರಾತ್ರಿ ಹೊಸ ಎಎಸ್‍ಪಿ
ಶಿವಮೊಗ್ಗ ಜಿಲ್ಲೆಗೆ ನೂತನ ಹೆಚ್ಚುವರಿ ಪೊಲೀಸ್ ಅಧೀಕ್ಷಕರನ್ನು ನಿಯೋಜಿಸಲಾಗಿದೆ. ಜಯಪ್ರಕಾಶ್ ಅವರನ್ನು ನೂತನ ಹೆಚ್ಚುವರಿ ಪೊಲೀಸ್ ಅಧೀಕ್ಷಕರನ್ನಾಗಿ ನೇಮಕ ಮಾಡಿ, ಪೊಲೀಸ್ ಮಹಾನಿರ್ದೆಶಕರು ಆದೇಶ ಹೊರಡಿಸಿದ್ದಾರೆ.
ಜಿಲ್ಲೆಗೆ ನಾಲ್ಕು ನೂತನ ಡಿವೈಎಸ್‍ಪಿಗಳು
ಜಿಲ್ಲೆಗೆ ನಾಲ್ವರು ಡಿವೈಎಸ್‍ಪಿಗಳನ್ನು ನಿಯೋಜಿಸಲಾಗಿದೆ. ತಕ್ಷಣದಿಂದಲೆ ಇವರು ಕರ್ತವ್ಯಕ್ಕೆ ಹಾಜರಾಗುವಂತೆ ನಿರ್ದೇಶನ ನೀಡಲಾಗಿದೆ. ಟಿ.ವಂಕಟೇಶ್, ಎಂ.ಕಲ್ಯಾಣ್ ಕುಮಾರ್, ನಿರಂಜನ ರಾಜೇ ಅರಸ್, ಟಿ.ಮಹದೇವ ಅವರನ್ನು ಶಿವಮೊಗ್ಗ ಜಿಲ್ಲೆಗೆ ನಿಯೋಜಿಸಲಾಗಿದೆ.
ಏಳು ಇನ್ಸ್‌ಪೆಕ್ಟರ್‌ಗಳ ನಿಯೋಜನೆ
ಜಿಲ್ಲೆಗೆ ಎಳು ಇನ್ಸ್‌ಪೆಕ್ಟರ್‌ಗಳನ್ನು ನಿಯೋಜಿಸಲಾಗಿದೆ. ಆರ್.ಜಿ.ಚನ್ನೇಗೌಡ, ಆರ್.ರಮೇಶ್, ಎಂ.ಎಸ್.ದೀಪಕ್, ಜಿ.ಕೆ.ಮಧುಸೂದನ್, ನಿತ್ಯಾನಂದ ಪಂಡಿತ್, ಸಿಐಡಿ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂ.ಗೋವಿಂದರಾಜು ಮತ್ತು ಕಿರಣ್ ಕುಮಾರ್ ಬಿ.ನಾಯಕ್ ಅವರನ್ನು ತಕ್ಷಣದಿಂದಲೇ ಕರ್ತವ್ಯಕ್ಕೆ ನಿಯೋಜನೆಗೊಳ್ಳುವಂತೆ ಸೂಚಿಸಲಾಗಿದೆ.
ಎಲ್ಲರಿಗೂ ಕೋವಿಡ್ 19 ಡ್ಯೂಟಿ
ಶಿವಮೊಗ್ಗದ ಕೆಲವು ಅಧಿಕಾರಿಗಳನ್ನು ಕ್ವಾರಂಟೈನ್‌ಗೆ ಒಳಪಡಿಸಿರುವ ಹಿನ್ನೆಲೆ, ಈ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಇವರಿಗೆಲ್ಲ ಕೋವಿಡ್ ೧೯ ಕರ್ತವ್ಯಕ್ಕೆ ನಿಯೋಜನೆ ಎಂದು ತಿಳಿಸಲಾಗಿದೆ.
ಎಸ್.ಪಿ. ಆಫೀಸ್‌ಗೆ ಸಂಪೂರ್ಣ ಸ್ಯಾನಿಟೈಸರ್
ಅಧಿಕಾರಿಗಳು ಕ್ವಾರಂಟೈನ್‍ಗೆ ಹೋಗುವಂತಾದ ಹಿನ್ನೆಲೆ ಜಿಲ್ಲಾ ಪೊಲೀಸ್ ಕೇಂದ್ರ ಕಚೇರಿಯನ್ನು ಸಂಪರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ. ಮಂಗಳವಾರ ಇಡೀ ಪೊಲೀಸ್ ಕಚೇರಿಯನ್ನು ಸ್ಯಾನಿಟೈಸ್ ಮಾಡಲಾಯಿತು. ಇನ್ನು ಸಿಬ್ಬಂದಿಗಳನ್ನು ತಪಾಸಣೆಗೆ ಒಳಪಡಿಸಲು ಸೂಚಿಸಲಾಗಿದೆ. ಮತ್ತೊಂದೆಡೆ ಜಿಲ್ಲಾ ಪೊಲೀಸ್ ಕಚೇರಿ ಕಂಪ್ಲೀಟ್ ಸೀಲ್‍ಡೌನ್ ಆಗಿದೆ ಎಂದು ವದಂತಿಗಳು ಹರಡಿದೆ. ಆದರೆ ಜಿಲ್ಲಾ ಪೊಲೀಸ್ ಕಚೇರಿಗೆ ಸಿಬ್ಬಂದಿಗಳು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಪೊಲೀಸರು ಕ್ವಾರಂಟೈನ್ ಆಗಲು ಕಾರಣವೇನು?
ಕರೋನ ಸೋಂಕಿತಳಿಂದಾಗಿ (ಪೇಷೆಂಟ್ ನಂಬರ್ 1304) ಪ್ರಮುಖ ಪೊಲೀಸ್ ಅಧಿಕಾರಿಗಳು ಕ್ವಾರಂಟೈನ್‍ಗೆ ಒಳಗಾಗುವಂತೆ ಆಗಿದೆ. ಪಿ1304 ಅಪ್ರಾಪ್ತ ಬಾಲಕಿ. ಪ್ರಕರಣ ಒಂದರ ಸಂಬಂಧ ಆಕೆಯನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಈ ಹಿನ್ನೆಯಲ್ಲಿ ಎಲ್ಲರು ಕ್ವಾರಂಟೈನ್‍ಗೆ ಒಳಗಾಗುವಂತಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]