ಡಿ.ಎಸ್.ಅರುಣ್ ಕಾರು ಅಪಘಾತ, ಅದೃಷ್ಟವಶಾತ್ ಎಲ್ಲರು ಪಾರು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ಜುಲೈ 2020

ರಾಜ್ಯ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್‍.ಅರುಣ್ ಅವರು ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಅರುಣ್ ಸೇರಿದಂತೆ ಕಾರಿನಲ್ಲಿದ್ದವರೆಲ್ಲ ಅದೃಷ್ಟವಶಾತ್ ಪಾರಾಗಿದ್ದಾರೆ. ಈ ಸಂಬಂಧ ಡಿ.ಎಸ್.ಅರುಣ್ ಅವರು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಸಿಎಂ ಭೇಟಿಗೆ ಇವತ್ತು ಡಿ.ಎಸ್‍.ಅರುಣ್ ಅವರು ಬೆಂಗಳೂರಿಗೆ ತೆರಳುತ್ತಿದ್ದರು. ಇವರು ಪಯಣಿಸುತ್ತಿದ್ದ ಕಾರಿಗೆ ಶಿರಾ ಬಳಿ ವಾಹನವೊಂದು ಅಡ್ಡ ಬಂದಿದೆ. ಅದಕ್ಕೆ ಡಿಕ್ಕಿ ಹೊಡೆಯುವುದು ತಪ್ಪಿಸಲು ಕಾರು ಅಪಘಾತಕ್ಕೀಡಾಗಿದೆ. ಚಾಲಕ ಸೇರಿ ಐವರು ಕಾರಿನಲ್ಲಿದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಡಿ.ಎಸ್.ಅರುಣ್ ಅವರು ತಿಳಿಸಿದ್ದಾರೆ.

https://www.facebook.com/livekarnatakamedia/videos/717027459119906/?t=0

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಸುದೇವ್, ಡಿ.ಎಂ.ಶಂಕರಪ್ಪ ಅವರು ಕಾರಿನಲ್ಲಿದ್ದರು.  

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment