ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 19 ಸೆಪ್ಟಂಬರ್ 2020
ಬಿ.ವಿ.ಕಾರಂತ ಅವರು ಕನ್ನಡ ರಂಗಭೂಮಿಗೆ ಮಾತ್ರವಲ್ಲದೆ, ಭಾರತೀಯ ರಂಗಭೂಮಿಗೆ ಹೊಸ ಸ್ವರೂಪ ನೀಡಿದ ರಂಗ ದಿಗ್ಗಜ ಎಂದು ರಂಗ ಸಮಾಜ ಸದಸ್ಯ ಜೀವನರಾಂ ಸುಳ್ಯ ಅವರು ಸ್ಮರಿಸಿದರು.
ಶಿವಮೊಗ್ಗ ರಂಗಾಯಣದಲ್ಲಿ ಬಿ.ವಿ.ಕಾರಂತ ಅವರ 91ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಾಮಾನ್ಯ ಹಿನ್ನೆಲೆಯಿಂದ ಬಂದು ಇಡೀ ಭಾರತೀಯ ರಂಗಭೂಮಿಗೆ ದಿಕ್ಸೂಚಿಯನ್ನು ತೋರಿದ ಬಿ.ವಿ.ಕಾರಂತ ಅವರು ಪಾಶ್ಚಾತ್ಯ ಸ್ವರೂಪದ ಪ್ರಭಾವದಲ್ಲಿದ್ದ ಭಾರತೀಯ ರಂಗಭೂಮಿಗೆ ಭಾರತೀಯತೆಯ ಸ್ಪರ್ಶವನ್ನು ಒದಗಿಸಿದವರು. ನನ್ನಂತಹ ಸಾವಿರಾರು ಕಲಾವಿದರಿಗೆ ರಂಗಭೂಮಿಯಲ್ಲಿ ನೆಲೆಯನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದು ಬಿ.ವಿ.ಕಾರಂತ ಅವರೊಂದಿಗೆ ಕೆಲಸ ಮಾಡಿದ ಅನುಭವಗಳನ್ನು ಹಂಚಿಕೊಂಡರು.
ಯುವ ಕಲಾವಿದರಿಗೆ ಸ್ಫೂರ್ತಿ
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಂಗ ಸಮಾಜದ ಸದಸ್ಯ ರಾಜಾರಾಮ್ ಅವರು ಮಾತನಾಡಿ, ರಂಗಭೂಮಿಯ ಬಗ್ಗೆ ಸ್ಪಷ್ಟವಾದ ಕಲ್ಪನೆಯಿದ್ದ ಬಿ.ವಿ.ಕಾರಂತ ಅವರು ಭಾರತೀಯ ರಂಗಭೂಮಿಗೆ ನೀಡಿದ ಕೊಡುಗೆ ಅಪಾರ. ಅವರ ನಾಟಕಗಳನ್ನು ಯುವ ಕಲಾವಿದರು ಹೆಚ್ಚೆಚ್ಚು ನೋಡುವ ಮೂಲಕ ಸ್ಪೂರ್ತಿಯನ್ನು ಪಡೆಯಬಹುದಾಗಿದೆ ಎಂದರು.
ರಂಗ ಸಮಾಜದ ಸದಸ್ಯ ಹಾಲಸ್ವಾಮಿ ಅವರು ಬಿ.ವಿ.ಕಾರಂತ್, ಕನ್ನಡ ರಂಗಭೂಮಿಗೆ ಹೊಸ ಸ್ವರೂಪವನ್ನು ನೀಡಿದವರು ಎಂದರು. ಶಿವಮೊಗ್ಗ ರಂಗಾಯಣದ ನಿರ್ದೇಶಕ ಸಂದೇಶ ಜವಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಬಿ.ವಿ.ಕಾರಂತ ಅವರು ರಾಜ್ಯದಲ್ಲಿ ರಂಗಾಯಣ ಹುಟ್ಟು ಹಾಕುವ ಮೂಲಕ ರಂಗಭೂಮಿಗೆ ಶಿಸ್ತನ್ನು ತಂದುಕೊಟ್ಟರು ಎಂದರು. ರಂಗ ಸಮಾಜದ ಸದಸ್ಯರಾದ ಶಿವೇಶ್ವರ ಗೌಡ ಅವರು ಉಪಸ್ಥಿತರಿದ್ದರು. ಶಿವಮೊಗ್ಗ ರಂಗಾಯಣ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಉಪಸ್ಥಿತರಿದ್ದರು. ಮಧುರಾ ಕಲಾತಂಡದವರ ರಂಗ ಸಂಗೀತ ಕಾರ್ಯಕ್ರಮ ನಡೆಸಿದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
LATEST NEWS
- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

About The Editor
ನಿತಿನ್ ಆರ್.ಕೈದೊಟ್ಲು






