ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 19 ಅಕ್ಟೋಬರ್ 2020
ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದ ವ್ಯವಸ್ಥೆ ಯಲ್ಲಿ ಉಂಟಾಗಿರುವ ತೊಂದರೆ ಗಳನ್ನು ನಿವಾರಿಸಬೇಕು ಎಂದು ಆಗ್ರಹಿಸಿ ಮಾನವ ಹಕ್ಕುಗಳ ಕಮಿಟಿ ಸೋಮವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸಿಗಂದೂರು ದೈವಿಕ ಕೇಂದ್ರವಾಗಿದ್ದು, ಭಕ್ತರ ಶ್ರದ್ದಾಭಕ್ತಿಯ ಕೇಂದ್ರವಾಗಿದೆ. ನಂಬಿದ ದೇವತೆಯ ಸನ್ನಿಧಿಯಲ್ಲಿ ಇಂತಹ ಘಟನೆ ನಡೆದಿರುವುದು ಖಂಡನೀಯವಾದುದು. ಮುಖ್ಯಮಂತ್ರಿಗಳು ಮಧ್ಯ ಪ್ರವೇಶ ಮಾಡಿ ದೇವಸ್ಥಾನವನ್ನು ಮುಜ ರಾಯಿ ಇಲಾಖೆಗೆ ಸೇರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ದೇವಾಲಯದಲ್ಲಿ ಪೂಜೆ ಪುನಸ್ಕಾರದಿಂದ ಹಣ ಹರಿದುಬರುತ್ತಿದೆ. ಇದನ್ನು ಗಮನಿಸಿದ ಧರ್ಮದರ್ಶಿ ಗಳು ಮತ್ತು ಪ್ರಧಾನ ಅರ್ಚಕ ದುರುಪಯೋಗಪಡಿಸಿಕೊಂಡು ಪರಸ್ಪರ ಜಗಳ ಮಾಡುತ್ತಿದ್ದಾರೆ. ನವರಾತ್ರಿ ಉತ್ಸವದ ಇಂತಹ ಸಂದರ್ಭದಲ್ಲಿ ರಾಜ್ಯದೆಲ್ಲೆಡೆ ದೇವಸ್ಥಾನಗಳು ಭಕ್ತಿಯ ಕೇಂದ್ರಗಳಾಗಿದ್ದರೆ ಇಲ್ಲಿ ಪರಸ್ಪರ ಶಕ್ತಿಯ ಸಂಘರ್ಷ ನಡೆಯುತ್ತಿದೆ. ಮುಖ್ಯಮಂತ್ರಿಗಳು ಇಲ್ಲಿನ ಮುಜುಗರವನ್ನು ತಪ್ಪಿಸಿ ದೇವಸ್ಥಾನದ ಜಗಳ ಬಗೆಹರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಸಮಿತಿಯ ಸಂಚಾಲಕ ರಮೇಶ್, ಜಿಲ್ಲಾಧ್ಯಕ್ಷ ದಯಾನಂದ್, ಜಯಮಾಲ ಶೆಟ್ಟಿ, ಶ್ರೀಧರ್, ಮಂಜುನಾಯ್ಡು, ಅಣ್ಣಪ್ಪ, ವಿನೋದ್, ವೀರೇಶಪ್ಪ, ರಮೇಶ್, ಬಸಪ್ಪ ಸೇರಿದಂತೆ ಹಲವರಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]