ಶಿವಮೊಗ್ಗ ಲೈವ್.ಕಾಂ | ANANDAPURA NEWS | 2 ನವೆಂಬರ್ 2020
ನರಸೀಪುರದ ನಾಟಿ ಔಷಧ ವಿತರಣಾ ಕಾರ್ಯ ಪುನಾರಂಭವಾಗಿದೆ. ಆದರೆ ಈ ಬಾರಿ ಸ್ಥಳ ಬದಲಾವಣೆ ಮಾಡಲಾಗಿದೆ. ನರಸೀಪುರ ಗ್ರಾಮದ ಬದಲು ಶಿವಗಂಗೆಯ ಗೋಡೋನ್ ಒಂದರಲ್ಲಿ ಔಷಧ ವಿತರಿಸಲಾಗುತ್ತಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸ್ಥಗಿತವಾಗಿತ್ತು ಔಷಧ ವಿತರಣೆ
ಕರೋನಾ ಲಾಕ್‍ಡೌನ್ ಪರಿಣಾಮ ಫೆಬ್ರವರಿಯಿಂದ ಔಷಧ ವಿತರಣೆ ಕಾರ್ಯ ಸ್ಥಗಿತವಾಗಿತ್ತು. ಜುಲೈ ತಿಂಗಳಲ್ಲಿ ನಾರಾಯಣಮೂರ್ತಿ ಅವರು ನಿಧನರಾದರು. ಈ ನಡುವೆ ನರಸೀಪುರಕ್ಕೆ ಬರುವ ಜನರು ಸ್ವಚ್ಛತೆ ಕಾಪಾಡುತ್ತಿಲ್ಲ ಮತ್ತು ಕರೋನಾ ಭೀತಿಯಿಂದ ಗ್ರಾಮಸ್ಥರು ಔಷಧ ವಿತರಣೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳ ಬದಲಾವಣೆ ಅನಿವಾರ್ಯವಾಗಿತ್ತು.
ಎಲ್ಲಿಗೆ ಶಿಫ್ಟ್ ಆಗಿದೆ?
ಔಷಧ ವಿತರಣೆ ಕಾರ್ಯವನ್ನು ಆನಂದಪುರದ ನರಸೀಪುರ ಗ್ರಾಮದ ಬದಲು ಬೇರೆಡೆ ಸ್ಥಳಾಂತರಿಸಲಾಗಿದೆ. ಆನಂದಪುರ – ಶಿಕಾರಿಪುರ ಮಾರ್ಗದ ಶಿವಗಂಗೆ ಗ್ರಾಮದ ಗೋಡೋನ್ ಒಂದಕ್ಕೆ ಸ್ಥಳಾಂತರಿಸಲಾಗಿದೆ. ಗೋಡೋನ್‍ನಲ್ಲಿ ಔಷಧ ವಿತರಣೆಗೆ ಪರವಾನಗಿ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಒಪ್ಪಿಗೆ ಸಿಕ್ಕ ಹಿನ್ನೆಲೆಯಲ್ಲಿ ಔಷಧ ವಿತರಣೆ ಆರಂಭವಾಗಿದೆ.
ವಾರದಲ್ಲಿ ಎರೆಡು ದಿನ ಮಾತ್ರ ಔಷಧ
ಮಾಧ್ಯಮಗಳ ಜೊತೆ ಮಾತನಾಡಿದ ದಿವಂಗತ ನಾರಾಯಣಮೂರ್ತಿ ಅವರ ಪುತ್ರ ರಾಘವೇಂದ್ರ, ವಾರದಲ್ಲಿ ಎರಡು ದಿನ ಮಾತ್ರ ಔಷಧ ವಿತರಣೆ ಮಾಡಲಾಗುತ್ತದೆ. ಭಾನುವಾರ ಮತ್ತು ಗುರುವಾರ ಮಾತ್ರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಔಷಧ ವಿತರಣೆ ಕಾರ್ಯ ನಡೆಯಲಿದೆ. ತಂದೆ ನೀಡಿದ ತರಬೇತಿ ಮತ್ತು ಮಾರ್ಗದರ್ಶನದಂತೆ ವಿವಿಧ ಕಾಯಿಲೆಗಳಿಗೆ ಔಷಧಿ ನೀಡಲಾತ್ತಿದೆ ಎಂದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]