ಶಿವಮೊಗ್ಗ ಲೈವ್.ಕಾಂ |SHIMOGA NEWS | 5 DECEMBER 2020
ಮಹಿಳೆಯರ ರಕ್ಷಣೆಗೆ ಶಿವಮೊಗ್ಗದ ಪೊಲೀಸ್ ಠಾಣೆಗಳಿಗೆ ನಿರ್ಭಯ ಬೈಕ್ ಬಂದಿದೆ. ಜಿಲ್ಲೆಯ ಎಲ್ಲಾ ಠಾಣೆಗಳಿಗೆ ಒಂದೊಂದು ಬೈಕ್ ನೀಡಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಏನಿದು ನಿರ್ಭಯ ಬೈಕ್?
ಜಿಲ್ಲೆಯ ಪ್ರತಿ ಠಾಣೆಗೆ ಒಂದು ನಿರ್ಭಯ ಬೈಕ್ ನೀಡಲಾಗಿದೆ. ತುರ್ತು ಸಂದರ್ಭದಲ್ಲಿ ಮಹಿಳೆಯರು ಕರೆ ಮಾಡಿದರೆ ನಿರ್ಭಯ ಬೈಕ್ ಹಾಜರಾಗುತ್ತದೆ. ಮಹಿಳೆಯರ ದೌರ್ಜನ್ಯ ಸಂಬಂಧ ಪ್ರಕರಣಗಳಿಗೆ ಮೀಸಲಾಗಿ ಈ ಬೈಕ್ ಬಳಕೆಯಾಗಲಿದೆ.
ಮಹಿಳೆಯರು ಸಂಪರ್ಕಿಸುವುದು ಹೇಗೆ?
ಪುಂಡರ ಹಾವಳಿ, ವರದಕ್ಷಿಣೆ ಕಿರುಕುಳ ಸೇರಿದಂತೆ ಯಾವುದೆ ರೀತಿಯ ದೌರ್ಜನ್ಯದ ಸಂದರ್ಭದಲ್ಲೂ ಮಹಿಳೆಯರು ನಿರ್ಭಯ ಬೈಕ್ ಪೊಲೀಸರನ್ನು ಸಂಪರ್ಕಿಸಬಹುದು. 112 ನಂಬರ್ಗೆ ಕರೆ ಮಾಡಿ, ತಾವು ಸಂಕಷ್ಟದಲ್ಲಿರುವ ವಿಚಾರ ತಿಳಿಸಿದರೆ ಸಾಕು, ಪೊಲೀಸರು ರಕ್ಷಣೆಗೆ ಹಾಜರಾಗುತ್ತಾರೆ.
ಪುಂಡರ ಹಾವಳಿ ತಪ್ಪಿಸಲು ಶಿವಮೊಗ್ಗದಲ್ಲಿ ಓಬವ್ವ ಪಡೆ ಸ್ಥಾಪಿಸಲಾಗಿದೆ. ಮಹಿಳಾ ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಿಸುವ ಓಬವ್ವ ಪಡೆ ಜೀಪ್ಗಳು, ತುರ್ತು ಸಂದರ್ಭದಲ್ಲಿ ಮಹಿಳೆಯರ ನೆರವಿಗೆ ಧಾವಿಸುತ್ತಿವೆ. ಈಗ ನಿರ್ಭಯ ಬೈಕ್ ವ್ಯವಸ್ಥೆ ಜಾರಿಗೆ ಬಂದಿದ್ದು, ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣಗಳು ಮತ್ತಷ್ಟು ತಗ್ಗುವ ಸಾಧ್ಯತೆ ಇದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]