ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 09 JANUARY 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಊರು ಉಸಾಬರಿ ನಮಗ್ಯಾಕೆ ಅಂತಾ ಓಡಾಡುವವರ ನಡುವೆ ಸರ್ಕಾರಿ ಶಾಲೆಯ ಹತ್ತನೆ ತರಗತಿ ವಿದ್ಯಾರ್ಥಿಯೊಬ್ಬನ ಕೆಲಸಕ್ಕೆ ಸಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈತನ ಕೆಲಸ ಎಲ್ಲರಲ್ಲು ನಾಗರೀಕ ಕರ್ತವ್ಯವನ್ನು ಬಡಿದೆಚ್ಚರಿಸುತ್ತಿದೆ.
ವಿದ್ಯಾರ್ಥಿ ಮಾಡಿದ್ದೇನು?
ಗಾಳಿ, ಮಳೆಗೆ ಮರದ ತುಂಡು ಒಂದು ರಸ್ತೆಗೆ ಬಿದ್ದಿತ್ತು. ವಾಹನ ಸವಾರರು ಮರದ ತುಂಡು ಬಿದ್ದ ಮತ್ತೊಂದು ಬದಿಯಲ್ಲಿ ವಾಹನಗಳನ್ನು ಕೊಂಡೊಯ್ದು ಚಲಿಸುತ್ತಿದ್ದರು. ಯಾರೊಬ್ಬರು ಅದನ್ನು ಪಕ್ಕಕ್ಕೆ ಸರಿಸುವ ಪ್ರಯತ್ನ ಮಾಡುತ್ತಿರಲಿಲ್ಲ. ಅದೆ ಮಾರ್ಗದಲ್ಲಿ ಸೈಕಲ್‍ನಲ್ಲಿ ಬಂದ ಸಾಲೂರು ಸರ್ಕಾರಿ ಶಾಲೆಯ ವಿದ್ಯಾರ್ಥಿ ಉತ್ತನ್, ಮರದ ತುಂಡನ್ನು ರಸ್ತೆಯಿಂದ ಪಕ್ಕಕ್ಕೆ ಸರಿಸಿದ್ದಾನೆ. ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಟ್ಟಿದ್ದಾನೆ.
ವೈರಲ್ ಆಯ್ತು ಫೋಟೊಗಳು
ಜಿಗಳಗೋಡಿನ ಲೀಲಾವತಿ – ಉಮೇಶ್ ದಂಪತಿಯ ಪುತ್ರ ಉತ್ತನ್ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮರದ ತುಂಡನ್ನು ಉತ್ತನ್ ಪಕ್ಕಕ್ಕೆ ಸರಿಸುತ್ತಿರುವ ಫೋಟೊಗಳು ಫೇಸ್‍ಬುಕ್, ವಾಟ್ಸಪ್‍ನಲ್ಲಿ ಷೇರ್ ಆಗುತ್ತಿದೆ. ಪಶುವೈದ್ಯಕೀಯ ವಿಭಾಗದ ಸರ್ಜನ್ ಯುವರಾಜ್ ಹೆಗಡೆ ಅವರು ಉತ್ತನ್ ಉತ್ತಮ ಕೆಲಸದ ಫೋಟೊಗಳನ್ನು ಕ್ಲಿಕ್ ಮಾಡಿದ್ದರು.
ನಾಗರೀಕ ಪ್ರಜ್ಞೆ ಜಾಗೃತಗೊಳಿಸಿದ
ಉತ್ತನ್ ಕೆಲಸ ಉಳಿದವರಲ್ಲಿ ನಾಗರಿಕ ಕರ್ತವ್ಯ ಮತ್ತು ನಾಗರಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದೆ. ಮರದ ಕೊಂಬೆಯನ್ನು ಬದಿಗೆ ಸರಿಸುವುದು ಆಡಳಿತದ ಕರ್ತವ್ಯ ಎಂದು ಭಾವಿಸಿ ಸುಮ್ಮನಾದರೆ, ಅನಾಹುತ ಸಂಭವಿಸುವ ಅಪಾಯವಿತ್ತು. ಉತ್ತನ್ ಕಾರ್ಯದಿಂದ ವಾಹನಗಳ ಸರಾಗ ಸಂಚಾರಕ್ಕೆ ಅವಕಾಶವಾಗಿದೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]