BHADRAVATHI | ಸದ್ಯದಲ್ಲೇ ಪ್ರಮುಖ ರಸ್ತೆ, ಸರ್ಕಲ್‌ಗಳ ಅಗಲೀಕರಣ, ವರ್ಷ ಮೊದಲೆ ಮುಗಿಯಿತು ಯುಜಿಡಿ ಕೆಲಸ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 02 FEBRUARY 2021

ಭದ್ರಾವತಿ ನಗರದ ಪ್ರಮುಖ ರಸ್ತೆಗಳು ಮತ್ತು ಸರ್ಕಲ್‍ಗಳನ್ನು ಸದ್ಯದಲ್ಲೇ ಅಗಲೀಕರಣ ಮಾಡಲಾಗುತ್ತದೆ ಎಂದು ನಗರಸಭೆ ಆಯುಕ್ತ ಮನೋಹರ್ ಅವರು ತಿಳಿಸಿದ್ದಾರೆ.

144389319 1320718648289552 7055575523475220885 n.jpg? nc cat=103&ccb=2& nc sid=730e14& nc ohc=P3uL9cBjMowAX99x2Lq& nc ht=scontent.fblr4 2

ಸರ್.ಎಂ.ವಿ.ಸಭಾಂಗಣದಲ್ಲಿ ಇವತ್ತು ನಗರಸಭೆಯ ಆಯವ್ಯಯದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಆಯುಕ್ತ ಮನೋಹರ್, ಭದ್ರಾವತಿ ಪಟ್ಟಣದ ರಂಗಪ್ಪ ಸರ್ಕಲ್, ಮಾಧವಾಚಾರ್ ಸರ್ಕಲ್ ಸೇರಿದಂತೆ ವಿವಿಧ ವೃತ್ತಗಳ ಅಗಲೀಕರಣ ಮಾಡಲಾಗುತ್ತದೆ. ಚನ್ನಗಿರಿ ರಸ್ತೆಯ ಅಗಲೀಕರಣ ಕಾರ್ಯವು ನಡೆಯಲಿದೆ. ಇದರ ಜೊತೆಗೆ ಇನ್ನಷ್ಟು ರಸ್ತೆ, ಸರ್ಕಲ್‍ ಗಳ ಅಗಲೀಕರಣ ಮಾಡಿ, ಅಭಿವೃದ್ಧಿಪಡಿಸಲಾಗುತ್ತದೆ ಎಂದು ತಿಳಿಸಿದರು.

ವರ್ಷಕ್ಕೂ ಮೊದಲೆ ಒಳ ಚರಂಡಿ ಪೂರ್ಣ

ವಿಜಯನಗರ ಸೇರಿದಂತೆ ಪಟ್ಟಣದ ಐದು ಕಡೆಯಲ್ಲಿ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿದೆ. 2022ಕ್ಕೆ ಕಾಮಗಾರಿ ಮುಗಿಯಬೇಕಿತ್ತು. ಅದರೆ ಒಂದು ವರ್ಷ ಮೊದಲೆ ಕಾಮಗಾರಿ ಪೂರ್ಣವಾಗಿದೆ. ಇದರ ಜೊತೆ 7.2 ಎಂಎಲ್‍ಡಿ ಸಾಮರ್ಥ್ಯದ ಎಸ್‍ಟಿಪಿ ಘಟಕ ನಿರ್ಮಿಸಲಾಗಿದೆ. ಶೀಘ್ರದಲ್ಲೇ ಇವುಗಳನ್ನು ಉದ್ಘಾಟಿಸಲಾಗುತ್ತದೆ ಎಂದು ಆಯುಕ್ತ ಮನೋಹರ್ ತಿಳಿಸಿದರು.

ಸಾರ್ವಜನಿಕ ಸಲಹೆ ಸ್ವೀಕಾರ

ಇದಕ್ಕೂ ಮೊದಲು ಆಯವ್ಯಯ ಸಂಬಂಧ ಸಾರ್ವಜನಿಕರಿಂದ ಸಲಹೆ ಸ್ವೀಕರಿಸಲಾಯಿತು. ಬಸವೇಶ್ವರ ಸರ್ಕಲ್‍ನಲ್ಲಿ  ಸಂಜೆ ವೇಳೆ ತಿಂಡಿ ತಿನಿಸು ಗಾಡಿಗಳಿಂದಾಗಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿರುವ ಕುರಿತು ಸಭೆಯಲ್ಲಿದ್ದವರೊಬ್ಬರು ಗಮನ ಸೆಳೆದರು. ನಗರ ಸಭೆ ಆಸ್ತಿ ಖಾಸಗಿ ವ್ಯಕ್ತಿಗಳ ಪಾಲಾಗದಂತೆ ತಡೆಯುವಂತೆ ಒಬ್ಬರು ಮನವಿ ಮಾಡಿದರು. ನಗರದ ವಿವಿಧೆಡೆ ಅನಗತ್ಯವಾಗಿ ಹೈಮಾಸ್ಕ್ ದೀಪಗಳನ್ನು ಅಳವಡಿಸಲಾಗಿದ್ದು, ಈ ಪರಿಪಾಠ ಮುಂದುವರೆಸದಂತೆ ಮನವಿ ಮಾಡಲಾಯಿತು.

ಭದ್ರಾವತಿಯ ವಿವಿಧ ಸಂಘಟನೆಗಳ ಮುಖಂಡರು, ನಗರಸಭೆಯ ವಿವಿಧ ವಿಭಾಗಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment