ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 18 FEBRUARY 2021
ಅಜೇಯ ಸಂಸ್ಕೃತಿ ಬಳಗದ ವತಿಯಿಂದ ಫೆ.21ರಂದು ಕಮಲಾ ನೆಹರು ಕಾಲೇಜಿನಲ್ಲಿ ಸಾರ್ವಜನಿಕರಿಗೆ ಪದಬಂಧ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಬಳಗದ ಕಾರ್ಯದರ್ಶಿ ಆರ್.ಅಚ್ಯುತರಾವ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆ ದಿನ ಬೆಳಗ್ಗೆ 11ರಿಂದ 12ರವರೆಗೆ ಈ ಸ್ಪರ್ಧೆ ನಡೆಯಲಿದೆ. 10 ಗಂಟೆಯಿಂದ ಸ್ಪರ್ಧಾ ಸ್ಥಳದಲ್ಲೇ ಹೆಸರು ನೋಂದಾಯಿಸಬಹುದಾಗಿದೆ. ಪ್ರವೇಶ ಶುಲ್ಕ ಒಬ್ಬರಿಗೆ 20 ರೂ. ನಿಗದಿ ಮಾಡಲಾಗಿದೆ. ನಿಗದಿತ ಅವಧಿಯಲ್ಲಿ 8 ಪದಬಂಧಗಳನ್ನು ಬಿಡಿಸಬೇಕಾಗುತ್ತದೆ. ಇದರಲ್ಲಿ ಒಂದು ಸಂಖ್ಯಾ ಬಂಧ ಎಂಬ ವಿಭಿನ್ನ ಸ್ಪರ್ಧೆಯು ಇದೆ. ಭಾಗವಹಿಸುವವರಿಗೆ ವಯೋಮಿತಿಯಿಲ್ಲ. ಸ್ಪರ್ಧಾ ಸಮಯದಲ್ಲಿ ಮೊಬೈಲ್ ಬಳಕೆಗೆ ಅವಕಾಶವಿರುತ್ತದೆ. ಆದರೆ, ಮಾತನಾಡುವಂತಿಲ್ಲ ಎಂದರು.
ಮಾರ್ಚ್ 7ರಂದು ಕರ್ನಾಟಕ ಸಂಘದಲ್ಲಿ ಬಹುಮಾನ ವಿತರಣೆ ನಡೆಯಲಿದೆ. ಪ್ರಥಮ ಬಹುಮಾನ 3 ಸಾವಿರ ರೂ., ದ್ವಿತೀಯ ಬಹುಮಾನ 2 ಸಾವಿರ ರೂ., ತೃತೀಯ ಬಹುಮಾನ 1 ಸಾವಿರ ರೂ. ಹಾಗೂ ತಲಾ 500ರೂ. ನ ನಾಲ್ಕು ಸಮಾಧಾನಕರ ಬಹುಮಾನಗಳಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಳಗದ ಗೌರವಾಧ್ಯಕ್ಷ ಜಿ.ಎಸ್. ನಾಗರಾಜು, ಉಪಾಧ್ಯಕ್ಷರಾದ ಡಾ. ಚಿತ್ರಲೇಖಾ, ಎಸ್. ನಾಗೇಶ್, ನಿರ್ದೇಶಕರಾದ ಆಚಿ ಪ್ರಕಾಶ್, ಜಿ.ಎಸ್. ಅನಂತ, ಹರೀಶ್ ಕಾರ್ಣಿಕ್, ಚೇತನ್ ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
LATEST NEWS
- ದುರಸ್ತಿ ವೇಳೆ ಲೈನ್ ಮ್ಯಾನ್‌ಗೆ ಕರೆಂಟ್ ಶಾಕ್, ಸ್ಥಳದಲ್ಲೆ ಸಾವು

- ಶಿವಮೊಗ್ಗದ ವಾಹನ ಸವಾರರೆ ಎಚ್ಚರ, ಪೊಲೀಸ್ ಇಲಾಖೆಯಿಂದ ಮಹತ್ವದ ಪ್ರಕಟಣೆ, ಏನದು?

- ಉಪನ್ಯಾಸಕ ಸುರೇಶ್ ನಿಗೂಢ ಸಾವು ಕೇಸ್, ಶಿವಮೊಗ್ಗ SP ಫಸ್ಟ್ ರಿಯಾಕ್ಷನ್, ಏನಂದ್ರು?

- ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಗದರ್ಶನ, ದೊಡ್ಡ ಸಂಖ್ಯೆಯ ಭಕ್ತರು ಭಾಗಿ

- ಟಾಟಾ ಏಸ್, ಆಟೋ ಡಿಕ್ಕಿ, ಮಗು ಸೇರಿ ಹಲವರಿಗೆ ಗಾಯ

About The Editor
ನಿತಿನ್ ಆರ್.ಕೈದೊಟ್ಲು















