ಶಿವಮೊಗ್ಗದಲ್ಲೂ ಅಂಗಡಿಗಳೆಲ್ಲ ಬಂದ್.. ಬಂದ್.. ವ್ಯಾಪಾರಿಗಳು ಗರಂ, ಎಲ್ಲೆಲ್ಲಿ ಹೇಗಿತ್ತು ಪರಿಸ್ಥಿತಿ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 APRIL 2021

ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ನೂತನ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅದರ ಅನ್ವಯ ಅಗತ್ಯ ವಸ್ತುಗಳ ಹೊರತು ಉಳಿದೆಲ್ಲ ವ್ಯಾಪಾರ, ವಹಿವಾಟುಗಳನ್ನು ಬಂದ್ ಮಾಡಲಾಯಿತು.

ಶಿವಮೊಗ್ಗ ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳಾದ ಗಾಂಧಿ ಬಜಾರ್, ನೆಹರೂ ರಸ್ತೆ, ಬಿ.ಹೆಚ್.ರಸ್ತೆ ಸೇರಿದಂತೆ ಹಲವು ಕಡೆ ಅಂಗಡಿಗಳನ್ನು ಬಂದ್ ಮಾಡಿಸಲಾಯಿತು.

ಪೊಲೀಸರು ಗಸ್ತು ತಿರುಗಿ ಮದ್ಯಾಹ್ನದಿಂದಲೇ ಅಂಗಡಿಗಳನ್ನು ಬಂದ್ ಮಾಡಿಸಿದರು. ಸರ್ಕಾರದ ಮಾರ್ಗಸೂಚಿ ಇರುವುದರಿಂದ ಅಂಗಡಿಗಳನ್ನು ಕೂಡಲೆ ಬಂದ್ ಮಾಡಬೇಕು ಎಂದು ಮೈಕ್ ಮೂಲಕ ಅನೌನ್ಸ್ ಮಾಡಿದರು.

ಗಾಂಧಿ ಬಜಾರ್‍ನಲ್ಲಿ ನಿಧಾನಗತಿ

ಮದ್ಯಾಹ್ನದಿಂದಲೇ ಗಾಂಧಿ ಬಜಾರ್‍ನಲ್ಲಿ ಪೊಲೀಸರು, ಅಂಗಡಿಗಳನ್ನು ಬಂದ್ ಮಾಡಿಸುವಂತೆ ಮನವಿ ಮಾಡಿದರು. ಆದರೆ ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದರಿಂದ ಗಸ್ತು ಹೆಚ್ಚಿಸಲಾಯಿತು. ಬಂದ್ ಮಾಡುವಂತೆ ಪೊಲೀಸರು ಸೂಚಿಸಿದರು. ಅಗತ್ಯ ವಸ್ತುಗಳ ಹೊರತು ಉಳಿದೆಲ್ಲ ಅಂಗಡಿಗಳು ಬಂದ್ ಮಾಡಲಾಯಿತು.

ವ್ಯಾಪಾರಿಗಳ ತೀವ್ರ ಆಕ್ರೋಶ

ಸರ್ಕಾರ ದಿನಕ್ಕೊಂದು ಮಾರ್ಗಸೂಚಿ ಪ್ರಕಟಿಸುತ್ತಿದೆ. ಇದರಿಂದ ಜನರಲ್ಲಿ ಗೊಂದಲ ನಿರ್ಮಾಣವಾಗುತ್ತಿದೆ. ಕಳೆದ ವರ್ಷದ ಲಾಕ್‍ಡೌನ್‍ನಿಂದಾಗಿ ವ್ಯಾಪಾರವಿಲ್ಲದೆ ಸಂಕಷ್ಟದಲ್ಲಿರುವಾಗ, ಮತ್ತೊಮ್ಮೆ ಹೊಡೆತ ಬಿದ್ದರೆ ಬದುಕು ದುಸ್ತರವಾಗಲಿದೆ ಎಂದು ಗಾಂಧಿ ಬಜಾರ್‍ನ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದರು.

ವಿಡಿಯೋ ನ್ಯೂಸ್

ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment