ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 21 ಆಗಸ್ಟ್ 2021
ನಿಲ್ಲಿಸಿದ್ದ ಮೊಪೆಡ್ ವಾಹನದಲ್ಲಿದ್ದ 1.85 ಲಕ್ಷ ರೂ. ಕಳ್ಳತನವಾಗಿದೆ. ಗಾಂಧಿ ಬಜಾರ್ ಮುಖ್ಯ ರಸ್ತೆಯಲ್ಲೇ ಕಳ್ಳರು ಹಣ ಕದ್ದೊಯ್ದಿದ್ದಾರೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮಹಿಳೆಯೊಬ್ಬರು ಸ್ವ ಸಹಾಯ ಸಂಘದಿಂದ ಸಾಲ ಪಡೆದು, ಹಣವನ್ನು ಮೊಪೆಡ್ ವಾಹನದಲ್ಲಿ ಇಟ್ಟಿದ್ದರು. ಗಾಂಧಿ ಬಜಾರ್’ನಲ್ಲಿ ಕೆಲವು ವಸ್ತುಗಳ ಖರೀದಿಗೆ ಬಂದಿದ್ದರು. ಆಗ ಘಟನೆ ಸಂಭವಿಸಿದೆ.
ಏನಿದು ಪ್ರಕರಣ? ಹೇಗಾಯ್ತ ಘಟನೆ?
ಬೊಮ್ಮನಕಟ್ಟೆಯ ನಾಗರಾತ್ನ ಎಂಬುವವರು ಸ್ವಸಹಾಯ ಸಂಘದಿಂದ ಎರಡು ಲಕ್ಷ ರೂ. ಸಾಲ ಪಡೆದಿದ್ದರು. ಜೈಲ್ ರಸ್ತೆಯಲ್ಲಿರುವ ಬ್ಯಾಂಕ್’ನಿಂದ ಸಾಲದ ಹಣ ಪಡೆದು, ನೀಲಿ ಪರ್ಸ್’ನಲ್ಲಿ ಹಾಕಿ, ಮೊಪೆಡ್ ವಾಹನದ ಡಿಕ್ಕಿಯಲ್ಲಿ ಇರಿಸಿದ್ದರು.
ವರಮಹಾಲಕ್ಷ್ಮಿ ಹಬ್ಬದ ಪೂಜಾ ಸಾಮಾಗ್ರಿ ಖರೀದಿಗಾಗಿ ನಾಗರತ್ನ ಅವರು ಗಾಂಧಿ ಬಜಾರ್’ಗೆ ಬಂದಿದ್ದರು. ಎರಡು ಲಕ್ಷದ ಪೈಕಿ 15 ಸಾವಿರ ರೂ. ಹಣವನ್ನು ತೆಗೆದುಕೊಂಡು, ಉಳಿದ ಹಣವನ್ನು ವಾಹನದ ಡಿಕ್ಕಿಯಲ್ಲೇ ಇಟ್ಟು ಅಂಗಡಿಗೆ ತೆರಳಿದ್ದರು. ಪೂಜಾ ಸಾಮಾಗ್ರಿಗಳನ್ನು ಖರೀದಿಸಿ ವಾಹನದ ಬಳಿಗೆ ಬಂದು ನೋಡಿದಾಗ ಉಳಿದ 1.85 ಲಕ್ಷ ರೂ. ಹಣ ಕಳುವಾಗಿರುವುದು ಬೆಳಕಿಗೆ ಬಂದಿದೆ.
ಗಾಬರಿಗೊಂಡ ನಾಗರತ್ನ ಅವರು ತಮ್ಮ ಪತಿಗೆ ವಿಚಾರ ತಿಳಿಸಿದ್ದಾರೆ. ಅಲ್ಲದೆ ಸ್ಥಳೀಯರಲ್ಲೂ ವಿಚಾರಿಸಿದ್ದಾರೆ. ಕೊನೆಗೆ ಕೋಟೆ ಠಾಣೆ ತೆರಳಿ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200