ಕಸ ಸಂಗ್ರಹಕ್ಕೆ ಹೋದಾಗ ಪಾಲಿಕೆ ಪೌರ ಕಾರ್ಮಿಕರ ಮೇಲೆ ಹಲ್ಲೆ, ವಾಹನದ ಮೇಲೆ ದಾಳಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ನವೆಂಬರ್ 2021

ಹಸಿ ಮತ್ತು ಒಣ ಕಸ ವಿಂಗಡಣೆ ಮಾಡಿ ಕೊಡುವಂತೆ ಸೂಚಿಸಿದ್ದಕ್ಕೆ ಮನೆಯವರು ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದೆ ವೇಳೆ ಮಹಾನಗರ ಪಾಲಿಕೆ ವಾಹನದ ಗಾಜ ಹಾನಿ ಮಾಡಲಾಗಿದೆ.

ಶಿವಮೊಗ್ಗದ 25ನೇ ವಾರ್ಡ್ ಜೆಪಿ ನಗರದಲ್ಲಿ ಕಸ ಸಂಗ್ರಹ ಮಾಡಲು ಹೋಗಿದ್ದಾಗ ಘಟನೆ ಸಂಭವಿಸಿದೆ.

ಹೇಗಾಯ್ತು ಘಟನೆ?

ಮಹಾನಗರ ಪಾಲಿಕೆ ತ್ಯಾಜ್ಯ ಸಂಗ್ರಹ ವಾಹನ ಜೆಪಿ ನಗರದಲ್ಲಿ ಕಸ ಸಂಗ್ರಹ ಮಾಡಲು ಹೋಗಿತ್ತು. ಈ ವೇಳೆ ಜೆಪಿ ನಗರದ ಮನೆಯೊಂದರಲ್ಲಿ ಚೀಲದಲ್ಲಿ ಕಸ ಕೊಟ್ಟಿದ್ದಾರೆ. ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಕೊಡಬೇಕು. ಇಲ್ಲವಾದಲ್ಲಿ ಕಸ ಸಂಗ್ರಹಿಸದಂತೆ ಸೂಚನೆ ಎಂದು ಲೋಡರ್ ದೇವರಾಜ್ ತಿಳಿಸಿದ್ದಾರೆ.

ಇದರಿಂದ ಆಕ್ರೋಶಗೊಂಡ ಯುವಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಪಾಲಿಕೆಯ ಕಸ ಸಂಗ್ರಹ ವಾಹನದ ಮುಂದಿನ ಗ್ಲಾಸ್’ಗೆ ಹಾನಿ ಮಾಡಲಾಗಿದೆ. ವಾಹನ ಚಾಲಕ ಮಂಜಾ ನಾಯ್ಕ್ ಅವರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಹಲ್ಲೆಗೊಳಗಾದ ದೇವರಾಜ್ ಮತ್ತು ಮಂಜಾ ನಾಯ್ಕ್ ಅವರನ್ನು ಕೂಡಲೆ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಈ ಸಂಬಂಧ ತುಂಗಾ ನಗರ ಠಾಣೆಯಲ್ಲಿ ದೂರು ನೀಡಲಾಗಿದೆ.

ADVT JULY NANJAPPA HOSPITAL HOME LAB TESTING

ಪೌರ ಕಾರ್ಮಿಕರ ಆಕ್ರೋಶ

ಪೌರ ಕಾರ್ಮಿಕರ ಮೇಲಿನ ಹಲ್ಲೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಗರವನ್ನು ಸ್ವಚ್ಛವಾಗಿ ಇಡುವಲ್ಲಿ ಶ್ರಮಿಸುತ್ತಿರುವವರ ಮೇಲೆ ಹಲ್ಲೆ ನಡೆಸುವವರ ವಿರುದ್ದ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ | ಇನ್ಮುಂದೆ ಶಿವಮೊಗ್ಗ ನಗರದಲ್ಲಿ ಕಸ ವಿಂಗಡಣೆ ಕಡ್ಡಾಯ, ವಾರದಲ್ಲಿ ಎರಡು ದಿನ ಮಾತ್ರ ಒಣ ಕಸ ಸಂಗ್ರಹ

 

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : November 15, 2021

Leave a Comment