‘ನಿನ್ನನ್ನು ನೋಡೋಕೆ ಬಂದಿದ್ದೀನಿ’ ಅಂತಾ ಮಾಜಿ ಸಿಎಂಗೆ ಏಕವಚನದಲ್ಲೇ ಕರೆದ ಪುಣಾಣಿ ಅಭಿಮಾನಿ, ಫೋಟೊ, ವಿಡಿಯೋ ವೈರಲ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 4 ಡಿಸೆಂಬರ್ 2021

ವಿಧಾನ ಪರಿಷತ್ ಚುನಾವಣೆ ಪ್ರಚಾರ, ಮುಖಂಡರು, ಕಾರ್ಯಕರ್ತರ ಭೇಟಿ, ರಾಜಕೀಯ ಜಂಜಾಟದ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಗುವಿನೊಂದಿಗೆ ಮಗುವಾಗಿದ್ದು ಗಮನ ಸೆಳೆದಿದೆ. ಮಗುವಿನೊಂದಿಗೆ ಸಿದ್ದರಾಮಯ್ಯ ಅವರು ಮಾತನಾಡಿದ್ದು, ಕೆಲ ಹೊತ್ತು ಸಮಯ ಕಳೆದಿದ್ದಾರೆ. ಅದರ ಫೋಟೊ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

AVvXsEg7D64eppM2Y2YXBDC80Q2TdBmP2uvjR kzBF IPI

ಚುನಾವಣಾ ಪ್ರಚಾರಕ್ಕಾಗಿ ಶಿವಮೊಗ್ಗಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಗರ ರಸ್ತೆಯ ಹರ್ಷಾ ಫರ್ನ್ ಹೊಟೇಲ್’ನಲ್ಲಿ ಉಳಿದಿದ್ದರು. ಸಿದ್ದರಾಮಯ್ಯ ಅವರನ್ನು ತೋರಿಸಲು ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪಕ್ ಕುಮಾರ್ ಅವರು ತಮ್ಮ ಮಗಳು ಸಾನ್ವಿಯನ್ನು ಹೊಟೇಲ್’ಗೆ ಕರೆದೊಯ್ದಿದ್ದರು.

ಪುಟಾಣಿಯನ್ನು ಕಂಡು ಖುಷಿಪಟ್ಟರು

ತಮ್ಮ ಸುತ್ತಲು ಮುಖಂಡರು, ಕಾರ್ಯಕರ್ತರಿದ್ದರೂ ಪುಟಾಣಿ ಸಾನ್ವಿಯನ್ನು ನೋಡುತ್ತಿದ್ದಂತೆ ಸಿದ್ದರಾಮಯ್ಯ ಖುಷಿ ಪಟ್ಟರು. ಹತ್ತಿರಕ್ಕೆ ಕರೆದು ಮಾತು ಆರಂಭಿಸಿದರು. ‘ಇಲ್ಲಿಗೇಕೆ ಬಂದಿದ್ದೀಯ?’ ಎಂದು ಪ್ರಶ್ನಿಸಿದರು. ‘ನಿನ್ನನ್ನು ನೋಡೋಕೆ ಬಂದಿದ್ದೀನಿ’ ಎಂದು ಹೇಳಿದಾಗ ಸಿದ್ದರಾಮಯ್ಯ ಸೇರಿದಂತೆ ಸುತ್ತಲು ಇದ್ದವರು ಜೋರಾಗಿ ನಗಾಡಿದರು.

ಆಗಾಗ ಬರುತ್ತಿದ್ದ ಫೋನ್ ಕರೆಗಳನ್ನು ಸ್ವೀಕರಿಸಿ ಮಾತು ಮುಗಿಸಿ, ಸಾನ್ವಿ ಜೊತೆಗೆ ಸಿದ್ದರಾಮಯ್ಯ ಅವರು ಕೆಲವು ನಿಮಿಷ ಕಳೆದರು. ಆಕೆಯನ್ನು ಮಾತನಾಡಿಸಿ, ಚನ್ನಾಗಿ ಓದಬೇಕು ಎಂದು ತಿಳಿಸಿದರು. ಕೆನ್ನೆಗೊಂದು ಮುತ್ತು ಕೊಡಿಸಿಕೊಂಡು ಖುಷಿ ಪಟ್ಟರು.

ರಾಜಕೀಯ ಒತ್ತಡದ ನಡುವೆಯು ಸಿದ್ದರಾಮಯ್ಯ ಅವರು ಮಗುವಿನೊಂದಿಗೆ ಮಗುವಾಗಿ, ಖುಷಿಪಟ್ಟ ವಿಡಿಯೋ, ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿದ್ದರಾಮಯ್ಯ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಫೇಸ್’ಬುಕ್, ವಾಟ್ಸಪ್’ನಲ್ಲಿ ಈ ಫೋಟೊ, ವಿಡಿಯೋಗಳನ್ನು ಷೇರ್ ಮಾಡುತ್ತಿದ್ದಾರೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment