ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 5 ಡಿಸೆಂಬರ್ 2021
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಗದಗ ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಅವರ ಜಾಮೀನು ಅರ್ಜಿಯನ್ನು ಶನಿವಾರ ವಜಾಗೊಳಿಸಲಾಗಿದೆ. ರುದ್ರೇಶಪ್ಪ ಅವರನ್ನು ಡಿಸೆಂಬರ್ 7ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
ನ.25ರಂದು ಎಸಿಬಿ ದಾಳಿ ಮಾಡಿ ಶಿವಮೊಗ್ಗದ ಎರಡು ಮನೆಗಳನ್ನು ಪರಿಶೀಲಿಸಿದಾಗ 9.50 ಕೆಜಿ ಚಿನ್ನಾಭರಣ, ಲಕ್ಷಾಂತರ ನಗದು ಸೇರಿ ವೇತನಕ್ಕಿಂತಲೂ ಶೇ.400ರಷ್ಟು ಹೆಚ್ಚು ಆಸ್ತಿ ಹೊಂದಿರುವುದು ಕಂಡುಬಂದಿದೆ.
ಈ ಕಾರಣಕ್ಕಾಗಿ ಅವರನ್ನು ಡಿ.7ರವರೆಗೆ ನ್ಯಾಯಾಂಗಕ್ಕೆ ಬಂಧನಕ್ಕೆ ನೀಡಲಾಗಿದೆ. ಆದರೆ, ರುದ್ರೇಶಪ್ಪ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಮತ್ತು ಸೆಷನ್ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ.
ಇದನ್ನೂ ಓದಿ | ಶಿವಮೊಗ್ಗದಲ್ಲಿ ಎಸಿಬಿ ದಾಳಿ, ರುದ್ರೇಶಪ್ಪನ ಬ್ಯಾಂಕ್ ಲಾಕರ್ ಶೋಧ, ಆದಾಯಕ್ಕಿಂತಲೂ ಶೇ.400ರಷ್ಟು ಹೆಚ್ಚು ಸಂಪಾದನೆ ಧೃಡ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422