BREAKING NEWS | ಶಿವಮೊಗ್ಗ ಹಾಲು ಒಕ್ಕೂಟಕ್ಕೆ ಹೊಸ ಅಧ್ಯಕ್ಷರು, ಅವಿರೋಧ ಆಯ್ಕೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗದ ಲೈವ್.ಕಾಂ | SHIMOGA NEWS |  1 ಜನವರಿ 2022

ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಒಕ್ಕೂಟದ ನೂತನ ಅಧ್ಯಕ್ಷರಾಗಿ ಶ್ರೀಪಾದ ಹೆಗಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರ ಚುನಾವಣೆಗೆ ಇವತ್ತು ದಿನಾಂಕ ನಿಗದಿಯಾಗಿತ್ತು.

AVvXsEichXaELYeDOhFU0n9XstiInpkhsI4y9y5uB VImqATyx1h3CLRA4zsRrFRxoiVo U462f0MYCBVD

ಶಿಮುಲು ಅಧ್ಯಕ್ಷರ ಚುನಾವಣೆ ಕೊನೆ ಹಂತದವರೆಗೂ ತೀವ್ರ ಕುತೂಹಲ ಮೂಡಿಸಿತ್ತು. ಕೊನೆ ಕ್ಷಣದಲ್ಲಿ ಪ್ರತಿಸ್ಪರ್ಧಿ ನಾಮಪತ್ರ ಹಿಂಪಡೆದ ಹಿನ್ನೆಲೆ ಶ್ರೀಪಾದ ಹೆಗಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇಬ್ಬರು ನಾಮಪತ್ರ ಸಲ್ಲಿಕೆ

ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಹಿರಿಯೂರಿನ ತಿಪ್ಪೇಸ್ವಾಮಿ ಮತ್ತು ಶ್ರೀಪಾದ ಹೆಗಡೆ ಅವರು ನಾಮಪತ್ರ ಸಲ್ಲಿಸಿದ್ದರು. ಇದರಿಂದ ಚುನಾವಣೆ ಬಗ್ಗೆ ಕುತೂಹಲ ಮೂಡಿತ್ತು.

ನಾಮಪತ್ರ ಹಿಂಪಡೆಯಲು 15 ನಿಮಿಷ ಕಾಲವಕಾಶವಿತ್ತು. ಈ ವೇಳೆ ತಿಪ್ಪೇಸ್ವಾಮಿ ಅವರು ತಮ್ಮ ನಾಮಪತ್ರ ಹಂಪಡೆದರು. ಹಾಗಾಗಿ ಶ್ರೀಪಾದ ಹೆಗಡೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ABOUT ME NEW FINAL FINAL

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment