ಶಿವಮೊಗ್ಗದ ಲೈವ್.ಕಾಂ | SHIMOGA CRIME NEWS | 7 ಫೆಬ್ರವರಿ 2022
ಶಿವಮೊಗ್ಗದ ಸಿಟಿ ಬಸ್ ಒಂದರಲ್ಲಿ ಮಹಿಳೆಯ ಪರ್ಸ್ ಕಳವು ಮಾಡಲಾಗಿದೆ. ಅದರಲ್ಲಿದ್ದ ಎಟಿಎಂ ಕಾರ್ಡ್ ಬಳಸಿ ಹಣವನ್ನು ಡ್ರಾ ಮಾಡಲಾಗಿದ್ದು, ಮಹಿಳೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶ್ರೀರಾಮ ನಗರದ ಕಾಮಾಕ್ಷಮ್ಮ ಎಂಬುವವರ ಪರ್ಸ್ ಕಳ್ಳತನವಾಗಿದೆ. ಪರ್ಸ್’ನಲ್ಲಿದ್ದ ಮೂರು ಎಟಿಎಂ ಕಾರ್ಡ್ ಬಳಸಿ ಹಣ ಡ್ರಾ ಮಾಡಲಾಗಿದೆ.
ಹೇಗಾಯ್ತು ಪರ್ಸ್ ಕಳ್ಳತನ?
ಕಾಮಾಕ್ಷಮ್ಮ ಅವರು ಖಾಸಗಿ ಸಂಸ್ಥೆಯೊಂದರಲ್ಲಿ ಅಟೆಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಮಂಗಳವಾರ ಕೆಲಸ ಮುಗಿಸಿ ಮನೆಗೆ ಬರುವಾಗ ಮಿಳಘಟ್ಟ ಸಂತೆಗೆ ಹೋಗಿದ್ದರು. ಸಂತೆ ಮುಗಿಸಿ ಸಿಟಿ ಬಸ್ ಹತ್ತಿ ಅಣ್ಣಾನಗರಕ್ಕೆ ಬಂದು ಇಳಿದಿದ್ದಾರೆ. ಆಗ ಕಾಮಾಕ್ಷಮ್ಮ ಅವರ ಪರ್ಸ್ ನಾಪತ್ತೆಯಾಗಿತ್ತು.
ಶಿವಮೊಗ್ಗ, ಭದ್ರಾವತಿಯಲ್ಲಿ ಹಣ ಡ್ರಾ
ಕಾಮಾಕ್ಷಮ್ಮ ಅವರ ಪರ್ಸ್’ನಲ್ಲಿ ಅವರಿಗೆ ಸೇರಿದ ವಿವಿಧ ಬ್ಯಾಂಕುಗಳ ಮೂರು ಎಟಿಎಂ ಕಾರ್ಡುಗಳಿದ್ದವು. ಪರ್ಸ್ ಕದ್ದವರು ಅದೇ ದಿನ ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಎಟಿಎಂ ಕಾರ್ಡ್ ಬಳಸಿ ಹಣ ಡ್ರಾ ಮಾಡಿದ್ದಾರೆ. 51,200 ರೂ. ಡ್ರಾ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಾಮಾಕ್ಷಮ್ಮ ಅವರು ಎಟಿಎಂ ಕಾರ್ಡ್ ಜೊತೆಗೆ ಅವುಗಳ ಪಾಸ್ ವರ್ಡ್ ಬರೆದು ಇಟ್ಟುಕೊಂಡಿದ್ದರು. ಇದು ಕಳ್ಳರಿಗೆ ಅನುಕೂಲವಾಗಿದೆ.
ಪರ್ಸ್ ಕಳೆದುಕೊಂಡಿದ್ದು ಮತ್ತು ಬ್ಯಾಂಕ್ ಖಾತೆಯಲ್ಲಿ ಹಣ ಡ್ರಾ ಮಾಡಲಾಗಿರುವ ಕುರಿತು ಕುಟುಂಬದವರೊಂದಿಗೆ ಚರ್ಚೆ ಮಾಡಿದ ಕಾಮಾಕ್ಷಮ್ಮ, ಬಳಿಕ ದೂರು ನೀಡಿದ್ದಾರೆ. ಪರ್ಸ್’ನಲ್ಲಿದ್ದ ಮೂರು ಎಟಿಎಂ ಕಾರ್ಡ್, ಪ್ಯಾನ್ ಕಾರ್ಡ್, ಐಡಿ ಕಾರ್ಡ್, ಪರ್ಸ್’ನಲ್ಲಿದ್ದ 300 ರೂ. ಕಳ್ಳತನವಾಗಿದೆ. ಅಲ್ಲದೆ ಎಟಿಎಂ ಕಾರ್ಡ್ ಬಳಸಿ 51,200 ರೂ. ಹಣ ಡ್ರಾ ಮಾಡಲಾಗಿದೆ.
ಕಳ್ಳನನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಕಾಮಾಕ್ಷಮ್ಮ ಅವರು ದೊಡ್ಡಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
About Shivamogga Live | Shimoga District Profile