ಸರಿದ ಪರದೆ, ಮೊಳಗಿದ ಘೋಷಣೆ, ಕೋಟೆ ಮಾರಿಕಾಂಬ ದೇವಿ ಜಾತ್ರೆಗೆ ವಿದ್ಯುಕ್ತ ಚಾಲನೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 22 ಮಾರ್ಚ್ 2022

ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆಗೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಬೆಳಗ್ಗೆಯಿಂದ ಗಾಂಧಿ ಬಜಾರ್’ನಲ್ಲಿ ಮಾರಿಕಾಂಬ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಜಾತ್ರೆ ಆರಂಭವಾಗಿದೆ.

Shimoga Nanjappa Hospital

ಸರಿದ ಪರದೆ, ಮೊಳಗಿದ ಘೋಷಣೆ

ಗಾಂಧಿ ಬಜಾರ್’ನಲ್ಲಿ ತಾಯಿಯ ತವರು ಮನೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಗಾಂಧಿ ಬಜಾರ್’ನಲ್ಲಿ ಮಂಟಪ ನಿರ್ಮಿಸಿ ಶ್ರೀ ಮಾರಿಕಾಂಬ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಪ್ರಥಮ ಪೂಜೆಗೂ ಮುನ್ನ ಪರದೆ ಸರಿಸಲಾಯಿತು. ಈ ಸಂದರ್ಭ ಭಕ್ತರು ಘೋಷಣೆಗಳನ್ನು ಮೊಗಳಗಿಸಿದರು.

ಪ್ರಥಮ ಪೂಜೆ, ಭಕ್ತರು ಪುನೀತ

ಬಿಬಿ ರಸ್ತೆಯ ಬ್ರಾಹ್ಮಣ ಸಮಾಜದ ನಾಡಿಗರ ಕುಟುಂಬವರು ಕೋಟೆ ಶ್ರೀ ಮಾರಿಕಾಂಬ ದೇವಿಗೆ ಪ್ರಥಮ ಪೂಜೆ ಸಲ್ಲಿಸಿದರು. ಮಂಗಳಾರತಿ ಬೆಳಗುತ್ತಿರುವುದನ್ನು ಕಂಡು ಭಕ್ತರು ಪುನೀತರಾದರು. ದೇವಿಗೆ ಪ್ರಾರ್ಥನೆ ಸಲ್ಲಿಸಿದರು.

ಹರಿದು ಬಂತು ಭಕ್ತ ಸಾಗರ

ತಾಯಿಯ ತವರು ಗಾಂಧಿ ಬಜಾರ್’ನಲ್ಲಿ ದರ್ಶನ ಪಡೆಯಲು ಭಕ್ತ ಸಾಗರ ಹರಿದು ಬಂದಿದೆ. ಬೆಳಗಿನ ಜಾವದಿಂದಲೇ ಸರತಿಯಲ್ಲಿ ನಿಂತಿರುವ ಜನರು, ದೇವಿಯ ದರ್ಶನ ಪಡೆಯುತ್ತಿದ್ದಾರೆ. ಯಾವುದೆ ಅಹಿತಕರ ಘಟನೆ ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

Kote Marikamaba Jathre

Kote Marikamba Jathre

Kote Marikamba Jathre

KB Prasanna Kumar

ಇದನ್ನೂ ಓದಿ | ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ 15 ಪ್ರಮುಖ ವಿಚಾರ

ಇದನ್ನೂ ಓದಿ | ವಾಹನ ಸವಾರರೆ ಗಮನಿಸಿ, ಮಾರಿಕಾಂಬ ಜಾತ್ರೆ ಹಿನ್ನೆಲೆ ಶಿವಮೊಗ್ಗ ಸಿಟಿಯಲ್ಲಿ ರಸ್ತೆ ಸಂಚಾರದಲ್ಲಿ ಬದಲಾವಣೆ

ಈ ಮೇಲ್ – shivamoggalive@gmail.com

WhatsApp Number – 7411700200

JNNCE College VTU Ranking

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment