ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 26 ಮಾರ್ಚ್ 2022
ಕರುವನ್ನ ಕತ್ತರಿಸಲು ಅಣಿಯಾಗಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಖಾಕಿ ಪಡೆಯನ್ನು ಕಂಡು ಮೂವರು ಪರಾರಿಯಾಗಿದ್ದು, ಕರುವನ್ನು ರಕ್ಷಣೆ ಮಾಡಲಾಗಿದೆ.
ಶಿವಮೊಗ್ಗದ ಗೋವಿಂದಾಪುರ ಗ್ರಾಮದ ಜಮೀನು ಒಂದರಲ್ಲಿ ಘಟನೆ ಸಂಭವಿಸಿದೆ. ಜಮೀನು ಮಾಲೀಕ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?
ಗೋವಿಂದಾಪುರದ ಜಮೀನಿನಲ್ಲಿ ಕರು ಒಂದನ್ನು ಕಡಿಯಲು ಮುಂದಾಗಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ತುಂಗಾ ನಗರ ಠಾಣೆ ಪಿಎಸ್ಐ ಶಿವಪ್ರಸಾದ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ಲಿಯಾಕತ್ ಎಂಬುವವರಿಗೆ ಸೇರಿದ ಜಮೀನನಲ್ಲಿ ರಾತ್ರಿ ಕರುವನ್ನು ಕಡಿಯಲು ಸಿದ್ಧತೆ ನಡೆಸಲಾಗಿತ್ತು. ಪೊಲೀಸರು ದಾಳಿ ನಡೆಸುತ್ತಿದ್ದಂತೆ ಕರುವನ್ನು ಪಕ್ಕದ ಗುಂಡಿಗೆ ತಳ್ಳಿ ಮೂವರು ಪರಾರಿಯಾಗಿದ್ದಾರೆ. ಗುಂಡಿಗೆ ಬಿದ್ದಿದ್ದ ಕರುವನ್ನ ಪೊಲೀಸರು ರಕ್ಷಣೆ ಮಾಡಿದ್ದಾರೆ.
ಸ್ಥಳದಲ್ಲಿ ಒಂದು ಚಾಕು, ತಗಡಿನ ಶೀಟ್, ಒಂದು ಮಚ್ಚು, ಪ್ಲಾಸ್ಟಿಕ್ ಕ್ರೇಟ್ ವಶಕ್ಕೆ ಪಡೆಯಲಾಗಿದೆ.
ಪರಾರಿಯಾದವರ ಗುರುತು ಪತ್ತೆ
ಪೊಲೀಸರ ದಾಳಿ ವೇಳೆ ಪರಾರಿಯಾದ ಮೂವರ ಗುರುತು ಪತ್ತೆಯಾಗಿದೆ. ಶಿವಮೊಗ್ಗದ ಇಮ್ರಾನ್ ಅಲಿಯಾಸ್ ಗಿಡ್ಡಿ, ಸಿರಾಜ್, ಸದ್ದಾಂ ಎಂದು ಗುರುತಿಸಲಾಗಿದೆ. ಈ ಮೂವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಜಮೀನು ಮಾಲೀಕ ಲಿಯಾಖತ್ ಎಂಬಾತನ ವಿರುದ್ಧವು ಎಫ್ಐಆರ್ ಮಾಡಲಾಗಿದೆ.
ಪಿಎಸ್ಐ ಶಿವಪ್ರಸಾದ್ ನೇತೃತ್ವದಲ್ಲಿ ಸಿಬ್ಬಂದಿ ಕಿರಣ್ ಮೋರೆ, ರಾಜು, ನಾಗರಾಜ್ ಅವರು ದಾಳಿಯಲ್ಲಿ ಪಾಲ್ಗೊಂಡಿದ್ದರು. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – shivamoggalive@gmail.com
WhatsApp Number – 7411700200
LATEST NEWS
- ನಾಳೆಯಿಂದ ಶಿವಮೊಗ್ಗದ ಶೇ.90ರಷ್ಟು ಹೊಟೇಲ್ಗಳು ಬಂದ್, ಕಾರಣವೇನು?

- ಭದ್ರಾವತಿ ಹುತ್ತಾ ಕಾಲೋನಿಯಲ್ಲಿ ಬೈಕ್ ಸಹಿತ ಚಾನಲ್ಗೆ ಬಿದ್ದ ವ್ಯಕ್ತಿ, ಆಗಿದ್ದೇನು?

- ಗೋಪಿ ಸರ್ಕಲ್ನಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದಂತೆ ನರೇಂದ್ರ ಮೋದಿ ಡಾನ್ಸ್, ಸೌದೆ ಒಲೆ ಅಡುಗೆ

- ಶಿವಮೊಗ್ಗ ಜಿಲ್ಲೆಯ ಕಡಿಮೆಯಾದ ತಾಪಮಾನ, ಇವತ್ತು ಎಲ್ಲೆಲ್ಲಿ ಹೇಗಿರಲಿದೆ ವಾತಾವರಣ?

- ಶಿವಮೊಗ್ಗದ ಸೂಳೆಬೈಲ್ ಮಹಿಳೆ ಅರೆಸ್ಟ್, ₹18,00,000 ಮೊತ್ತದ ಆಭರಣ ಸೀಜ್, ಏನಿದು ಕೇಸ್?

About The Editor
ನಿತಿನ್ ಆರ್.ಕೈದೊಟ್ಲು





